ಕಾಸರಗೋಡು: ಪೈಪ್ ಲೈನ್ ಅಳವಡಿಕೆಗೆ ಹೊಂಡ ತೋಡುತ್ತಿದ್ದಾಗ ಆವರಣ ಗೋಡೆಯು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನ.20ರಂದು ಸಂಜೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕರ್ನಾಟಕ ಮೂಲದ ಲಕ್ಷ್ಮಪ್ಪ (42) ಮತ್ತು ಬಿ.ಎಂ ಬಸಯ್ಯ (40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಮತ್ತಿಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪೈಪ್ ಲೈನ್ ಅಳವಡಿಕೆಗೆ ಹೊಂಡ ತೋಡುತ್ತಿದ್ದಾಗ ಬದಿಯಲ್ಲಿದ್ದ ಆವರಣ ಗೋಡೆಯು ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ಪರಿಸರವಾಸಿಗಳು ಮತ್ತು ಪೊಲೀಸರು ಹೊರತೆಗೆದರು. ಆದರೆ ಇಬ್ಬರು ಮೃತಪಟ್ಟಿದ್ದಾರೆ.