ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಕಾರ್ಯಾಲಯ ಉಪ್ಪಳದಲ್ಲಿ ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ ಅಶ್ರಫ್, ಕನ್ವೀನರ್ ಮಂಜುನಾಥ ಆಳ್ವ, ಚಯರ್‌ಮೆನ್ ಅಜೀಜ್ ಮರಿಕೆ, ಲೀಗ್ ನೇತಾರರಾದ ಟಿ.ಎ ಮೂಸಾ, ಎಂ. ಅಬ್ಬಾಸ್, ಎಂ.ಬಿ ಯೂಸಫ್, ಎ.ಕೆ ಅರೀಫ್, ಕಾಂಗ್ರೇಸ್ ನೇತಾರರಾದ ಡಿ.ಎಂ.ಕೆ ಮೊಹಮ್ಮದ್, ಲೋಕನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.