ಉಡುಪಿ: ಜಿಲ್ಲೆಯಲ್ಲಿಯೂ ವಾಣಿಜ್ಯ ಉದ್ದೇಶದ ಅಡುಗೆ ಅನಿಲ ಸಮಸ್ಯೆ ಕಂಡುಬಂದಿದ್ದು, ಗುರುವಾರ ಹಲವು ಹೊಟೇಲ್‌ಗಳಲ್ಲಿ ಸೌದೆ ಬಳಸಿ ಅಡುಗೆ ತಯಾರಿಸಿದ ದೃಶ್ಯ ಕಂಡುಬಂದಿದೆ.

ಕೆಲವು ಹೊಟೇಲ್‌ಗಳಲ್ಲಿ ಬೆಳಗ್ಗಿನ ತಿಂಡಿ ಮಾತ್ರವಿದ್ದು, ಮಾಧ್ಯಾಹ್ನ ಊಟ ಇರಲಿಲ್ಲ. ಇನ್ನು ಕೆಲವು ಹೊಟೇಲ್‌ಗಳಲ್ಲಿ ಮಧ್ಯಾಹ್ನದ ಊಟ ಮಾತ್ರ ಇದ್ದು, ರಾತ್ರಿ ಊಟದ ವ್ಯವಸ್ಥೆ ಮಾಡಿರಲಿಲ್ಲ. ಅಲ್ಲದೆ ಕಡಿಮೆ ಗ್ಯಾಸ್‌ನಲ್ಲಿ ಮಾಡಬಹುದಾದ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಿದ್ದಾರೆ. ಮೀನು ಹೊಟೇಲ್‌ಗಳು ಫ್ರೈ ಸಹಿತ ವಿವಿಧ ಆಹಾರ ಪದಾರ್ಥ ಸಿದ್ಧಪಡಿಸಲು ಸೌದೆ ಒಲೆ ಬಳಕೆ ಮಾಡಿರುವುದು ಕಂಡು ಬಂದಿದೆ.
ಶ್ರೀ ಕೃಷ್ಣಮಠದಲ್ಲಿ ನಡೆಯುವ ಅನ್ನದಾನ ಹಾಗೂ ಊಟೋಪಚಾರ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ ಎಂದು ಪರ್ಯಾಯ ಶ್ರೀ ಶಿರೂರು ಮಠದ ದಿವಾನರಾದ ಡಾ | ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ. ಸದ್ಯ ಅಡುಗೆ ಅನಿಲ ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಅಭಾವ ಉಂಟಾದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ಸದಾ ಸಿದ್ಧವಾಗಿದೆ. ಬಯೋಗ್ಯಾಸ್ ಘಟಕ ಅಳವಡಿಸುವ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದರು.
ಕಟ್ಟಿಗೆಗೆ ದಿಢೀರ್ ಬೇಡಿಕೆ:
ಕಮರ್ಶಿಯಲ್ ಗ್ಯಾಸ್ ಇಲ್ಲದ ಕಾರಣ ಹಲವೆಡೆ ಸೌದೆಗೆ ಬೇಡಿಕೆ ಹೆಚ್ಚಿದೆ. ದೇವಸ್ಥಾನಗಳು, ದೊಡ್ಡ ಹೊಟೇಲ್‌ಗಳಲ್ಲಿನ ಬಾಯ್ಸರ್‌ಬಿಸಿ ಮಾಡಲು ಕಟ್ಟಿಗೆ ಒಲೆಯೇ ಇದೆ, ಅಂತಹ ಕಡೆಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ಕಟ್ಟಿಗೆ ಪೂರೈಕೆದಾರರು ತಿಳಿಸಿದ್ದಾರೆ.




