ಉಡುಪಿ: ಅಪರಿಚಿತ ವಾಹನವೊಂದು ನಗರದ ಚಿತ್ತರಂಜನ್ ಸರ್ಕಲ್ ನಲ್ಲಿರುವ ಮಂಟಪಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಮಂಟಪಕ್ಕೆ ಹಾನಿ ಉಂಟಾಗಿದೆ.
ವಾಹನ ಗುದ್ದಿದ ತೀವ್ರತೆಗೆ ಮಂಟಪದ ನಾಲ್ಕು ಕಂಬಗಳಲ್ಲಿಯೂ ಬಿರುಕು ಬಿಟ್ಟಿದ್ದು, ಮಂಟಪು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಂಟಪದ ನೆರಳಿನಲ್ಲಿ ವಲಸೆ ಕಾರ್ಮಿಕರು, ಹಮಾಲಿಗಳು ವಿಶ್ರಾಂತಿ ಪಡೆಯುತ್ತಿರುತ್ತಾರೆ.
ಇದೀಗ ನಾಲ್ಕು ಕಂಬಗಳು ಶಿಥಿಲಗೊಂಡಿರುವುದರಿಂದ ಗೋಪುರದ ಭಾರದ ನಿಯಂತ್ರಣ ಸಿಗದೆ ಮಂಟಪವು ಯಾವುದೇ ಕ್ಷಣದಲ್ಲಿಯೂ ಉರುಳಿಬಿದ್ದು, ಸಾವು ನೋವು ಸಂಭವಿಸುವ ಸಾಧ್ಯತೆ ಇದೆ.
ಹೀಗಾಗಿ ತಕ್ಷಣವೇ ನಗರಸಭೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.