ಉಡುಪಿ: ದ್ವಿಚಕ್ರ ವಾಹನಗಳು ಢಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಕಲ್ಸಂಕ ಅಂಬಾಗಿಲು ರಸ್ತೆಯಲ್ಲಿ ಸಂಭವಿಸಿದೆ.

ಸಂಜೀವ ಅವರು ಬೈಕನ್ನು ಅಂಬಾಗಿಲು ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿ ಪಾಡಿಗಾರ ಗೇಟ್ ಬಳಿ ತೀರಾ ಬಲಬದಿಗೆ ಹೋಗಿದ್ದು, ಅಲ್ಲಿ ಅಂಬಾಗಿಲು -ಕಲ್ಸಂಕ ಕಡೆಗೆ ಹೋಗುವ ರಸ್ತೆಗೆ ತಿರುಗಿಸಲು ನಿಂತಿದ್ದ ಕೊಡವೂರಿನ ವಿನೋದ್ ಕುಮಾರ್ ಅವರ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಎರಡೂ ವಾಹನಗಳು ರಸ್ತೆಗೆ ಬಿದ್ದು ಸವಾರರು ಮತ್ತು ಸಹಸವಾರರಾದ ಬಸವರಾಜ್ ಮತ್ತು ಕಾವ್ಯಾ ಗಾಯಗೊಂಡಿದ್ದಾರೆ. ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




