
ಉಡುಪಿ : ಸಿದ್ದರಾಮಯ್ಯ ಸರಕಾರದ ಇಬ್ಬರು ಸಚಿವರು ಕಾಣೆಯಾಗಿದ್ದಾರೆ ಎನ್ನುವ ಬಿತ್ತಿ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಾರಂಭದ ದಿನಗಳಿಂದಲೂ ಕೂಡ ಉಡುಪಿಯಲ್ಲಿಯೇ ಮನೆ ಮಾಡುತ್ತೇನೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ ಮನೆ ಮಾಡಿದ ಬಳಿಕವೂ ಕೂಡ ಸಚಿವೆ ಉಡುಪಿಯತ್ತ ಮುಖ ಮಾಡಿಲ್ಲ. ಆಗೊಮ್ಮೆ ಈಗೊಮ್ಮೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಮಳೆಯಂತೆ ಸುಳಿದು ಹೋಗುತ್ತಿದ್ದಾರೆ.

ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು, ಪಕ್ಕದ ಜಿಲ್ಲೆಯಲ್ಲಿ ಇದ್ದರೂ ಕೂಡ ಉಡುಪಿಗೆ ನೆಂಟರು ಬಂದ ಹಾಗೆ ಬಂದು ಹೋಗುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜಿಲ್ಲೆಯಲ್ಲಿ ಲೈಟ್ ಫಿಶಿಂಗ್ ಸಮಸ್ಯೆಯಿಂದ ಹಿಡಿದು ಮೀನುಗಾರರ ಸಾಕಷ್ಟು ಸಮಸ್ಯೆಗಳು ಪರಿಹಾರ ಕಾಣದೆ ಬಾಕಿ ಇದ್ದರೂ ಕೂಡ ಇದುವರೆಗೆ ಮೀನುಗಾರಿಕಾ ಸಚಿವರು ಜಿಲ್ಲೆಯತ್ತ ಮುಖ ಮಾಡಿ ನೋಡುವ ಪ್ರಯತ್ನ ಮಾಡಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸದ್ಯ ಜಿಲ್ಲೆಯ ಇಬ್ಬರು ಸಚಿವರ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಉಡುಪಿ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.




