ಉಡುಪಿ: ಬ್ರಹ್ಮಾವರ ಆಕಾಶವಾಣಿ ಸರ್ಕಲ್ ಸಮೀಪ ಎಲೆಕ್ಟ್ರಿಕ್ ಸ್ಕೂಟರೊಂದು ಧಗಧಗನೆ ಉರಿದ ಘಟನೆ ಸಂಭವಿಸಿದೆ.
ರಸ್ತೆ ಬದಿ ನಿಲ್ಲಿಸಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ. ರಸ್ತೆ ಬದಿ ಸ್ಕೂಟರ್ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ನೂರಾರು ಜನರು ಆತಂಕಗೊಂಡರು. ಕರಾವಳಿಯಲ್ಲಿ ಉರಿಬಿಸಿಲಿನ ಧಗೆ ಇರುವುದರಿಂದ ಕ್ಷಣಾರ್ಧದಲ್ಲೇ ಸ್ಕೂಟರ್ ಹೊತ್ತಿ ಭಸ್ಮವಾಯಿತು.