ಉಡುಪಿ: ವನಸುಮ ವೇದಿಕೆ ಕಟಪಾಡಿ ಇದರ ಮೂರು ದಿನಗಳ ರಂಗೋತ್ಸವ-2024 ಕಾರ್ಯಕ್ರಮ ಅಂಬಲ್ಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ನಡೆಯಿತು.
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಇವರಿಗೆ ‘ವನಸುಮ ರಂಗಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆಯ ಅಧ್ಯಕ್ಷ ಬಾಸುಮ ಕೊಡಗು, ಕಾರ್ಯದರ್ಶಿ ವಿನಯ್ ಆಚಾರ್ಯ, ಖಜಾಂಜಿ ಕಾವ್ಯವಾಣಿ ಕೊಡಗು ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ವನಸುಮ ವೇದಿಕೆ ಕಲಾವಿದರಿಂದ ಬಾಸುಮ ಕೊಡಗು ನಿರ್ದೇಶನದ ‘ಸುಳಿಯಲ್ಲಿ ಸಿಕ್ಕವರು’ ನಾಟಕ ಪ್ರದರ್ಶನ ನಡೆಯಿತು.