ಉಡುಪಿ: ಜೂ.8ರಿಂದ 9ರವರೆಗೆ ದೊಡ್ಡಣಗುಡ್ಡೆೆ ಪುಷ್ಪ ಹರಾಜು ಕೇಂದ್ರದಲ್ಲಿ “ಹಲಸು ಮೇಳ”

Share with

ಉಡುಪಿ: ಅಂಜನ್ ಕನ್ಸ್ ಸ್ಟ್ರಕ್ಷನ್ ಆಶ್ರಯದಲ್ಲಿ ಹಲಸು ಮೇಳವನ್ನು ಇದೇ ಜೂ.8ರಿಂದ 9ರವರೆಗೆ ದೊಡ್ಡಣಗುಡ್ಡೆೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರಾದ ಶೈಲಾ ಪೈ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳದಲ್ಲಿ ಚಂದ್ರ ಹಲಸು, ಏಕಾದಶಿ, ರುದ್ರಾಕ್ಷಿ ಮುಂತಾದ ಸಿಹಿ ಹಾಗೂ ರುಚಿಕರವಾದ ಹಲಸಿನ ಹಣ್ಣು ಲಭ್ಯವಿರಲಿದೆ. ಅಲ್ಲದೆ, ಹಲಸಿನ ಖಾದ್ಯ ಹೋಳಿಗೆ, ಪತ್ರೊಡೆ, ಹಲ್ವ, ಮುಳ್ಕ, ಗಟ್ಟಿ, ಜ್ಯೂಸ್, ಐಸ್‌ಕ್ರೀಂ, ವೈವಿಧ್ಯಮಯ ಸ್ವಾದವುಳ್ಳ ಉತ್ಪನ್ನಗಳನ್ನು ತಯಾರಿಸಿ ನೀಡಲಾಗುವುದು. ಇದರ ಜತೆಗೆ ಮಾವು ಹಾಗೂ ಇತರ ಮಳಿಗೆಗಳೂ ಇರಲಿವೆ ಎಂದರು.
ತುಮಕೂರು, ದಾವಣಗೆರೆ, ಉಡುಪಿ ಸಹಿತ ಹಲವು ಜಿಲ್ಲೆೆಗಳ ರೈತರು ಆಗಮಿಸಲಿದ್ದಾರೆ. ಬೆಳಗ್ಗೆೆ 9ರಿಂದ ಸಂಜೆ 7ರವರೆಗೆ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಅಕ್ಷತ್ ಪೈ, ತಕ್ಷತ್ ಪೈ, ಸಂದೀಪ್ ಅಲೆವೂರು, ಶ್ರೀಕಾಂತ್ ಅಲೆವೂರು ಇದ್ದರು.


Share with

Leave a Reply

Your email address will not be published. Required fields are marked *