ಉಡುಪಿ: ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ

Share with

ಉಡುಪಿ: ಉಡುಪಿ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕ ಇವರ ಸಹಯೋಗದಲ್ಲಿ ವಿಶಿಷ್ಟವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಉಡುಪಿ ಕ್ಲಾಕ್ ಟವರ್ ನಿಂದ ಶ್ರೀ ಕೃಷ್ಣ ಮಠದವರೆಗೆ ನೂರಾರು ಜನ ಯೋಗ ನಡಿಗೆಯನ್ನು ಮಾಡಿದರು. ಯೋಗೀಶ್ವರನೆಡೆಗೆ ಯೋಗ ನಡಿಗೆ ಎಂಬ ಶೀರ್ಷಿಕೆ ಅಡಿ ಈ ಕಾರ್ಯಕ್ರಮ ನಡೆಯಿತು.

ಯೋಗದ ಮಹತ್ವ ಸಾರಲು ಈ ಕಾರ್ಯಕ್ರಮ ನಡೆಸಲಾಯ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು. ಶ್ರೀಕೃಷ್ಣನಿಗೆ ಇರುವ ಇನ್ನೊಂದು ಹೆಸರು ಯೋಗೇಶ್ವರ. ಯಾರು ಯೋಗ ಅನುಸರಿಸ್ತಾರೆ ಅವರಿಗೆ ಆರೋಗ್ಯ ಎಲ್ಲಾ ರೀತಿಯ ಸಂಪತ್ತು ಒಲಿಯುತ್ತದೆ. ಭಗವದ್ಗೀತೆ ಯೋಗದ ಮೂಲ. ಆಸನ ಪ್ರಾಣಾಯಾಮಗಳು ಮಾತ್ರ ಯೋಗಗಳಲ್ಲ. ನಮ್ಮ ಜೀವನದ ಎಲ್ಲಾ ಕರ್ಮಗಳು ಪರಿಪೂರ್ಣತೆಯಾದರೆ ಅದೆಲ್ಲವೂ ಯೋಗವೇ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನನ್ನ ದೇಶ ಶ್ರೇಷ್ಠ ಆಗಬೇಕು ಎಂಬುದು ಎಲ್ಲರ ಕನಸು. ಯೋಗದ ಮೂಲಕ ವಿಶ್ವದ ಗುರು ಎಂದು ಭಾರತ ಸಾಬೀತು ಮಾಡಿದೆ. ವಿಶ್ವದ 193 ದೇಶದಲ್ಲಿ ಯೋಗಕ್ಕೆ ಮನ್ನಣೆ ಸಿಕ್ಕಿದೆ. ಬದುಕಿನ ಪ್ರತಿದಿನ ಯೋಗಕ್ಕೆ ಅವಕಾಶ ಕೊಡಿ ಎಂದರು.


Share with

Leave a Reply

Your email address will not be published. Required fields are marked *