ಉಡುಪಿ: ಶ್ರೀ ಕೃಷ್ಣಮಠಕ್ಕೆ ಖ್ಯಾತ ಗಾಯಕ ಸಾಯಿ ವಿಘ್ನೇಶ್ ಭೇಟಿ ನೀಡಿದ್ದರು. ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ…’ ಹಾಡಿನ ಮೂಲಕ ದೇಶದ ಗಮನ ಸೆಳೆದಿದ್ದ ಗಾಯಕ, ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ ವೇಳೆ ಮಠಕ್ಕೆ ಭೇಟಿ ಕೊಟ್ಟರು.
ಶ್ರೀ ಕೃಷ್ಣ ದರ್ಶನ ಕೈಗೊಂಡ ಬಳಿಕ, ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ, ಸುಶ್ರೀಂದ್ರ ಸಮ್ಮುಖದಲ್ಲಿ ವರಾಹ ರೂಪಂ ಹಾಡು ಹಾಡಿದರು. ವಿಘ್ನೇಶ್ ಅವರ ಹಾಡು ಕೇಳಿ ಶ್ರೀಪಾದರು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಗಾಯಕ ವಿಘ್ನೇಶ್ ಗೌರವ ಸ್ವೀಕರಿಸಿದರು. ಶ್ರೀ ಕೃಷ್ಣ ಮಠದ ಕಲಾವಿದರಾದ ನಾರಾಯಣ ಸರಳಾಯ ಜೊತೆಗಿದ್ದರು.