ಉಡುಪಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಉಡುಪಿ ಅನಂತೇಶ್ವರ ದೇವಾಲಯದಲ್ಲಿ ಮಾ.8ರಂದು ವಿಶೇಷ ಪೂಜೆ ನಡೆಯಿತು. ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯ ಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು.
ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಅನಂತೇಶ್ವರ ದೇವರ ದರ್ಶನ ಪಡೆದರು. ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಅನ್ನಸಂತರ್ಪಣೆ ಮಹಾ ಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳು ಶಿವನಿಗೆ ಪ್ರಿಯವಾದ ಎಳ್ಳೆಣ್ಣೆ, ಸೀಯಾಳ, ಬಿಲ್ವಪತ್ರೆ, ರುದ್ರಾಭಿಷೇಕ ಸೇವೆ ಸಮರ್ಪಿಸಿದರು.