ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆ: 95 ಮಂದಿ ಗೈರು

Share with

ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ(ಮಾ.25 ರಿಂದ) ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದ್ದು, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತವು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

ಕನ್ನಡ ಭಾಷಾ ಪರೀಕ್ಷೆ ದಿನದಂದು ನಗರದ ಮಣಿಪಾಲ ಜೂನಿಯರ್ ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮೊದಲನೇ ದಿನವಾದ ಮಾ.25ರಂದು ಕನ್ನಡ ಭಾಷಾ ಪರೀಕ್ಷೆ ದಿನದಂದು ನಗರದ ಮಣಿಪಾಲ ಜೂನಿಯರ್ ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 13,701 ಜನ ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 13606 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 95 ಮಂದಿ ಗೈರು ಹಾಜರಾಗಿರುತ್ತಾರೆ.

ಬೈಂದೂರು ತಾಲೂಕಿನಲ್ಲಿ ಒಟ್ಟು 2055 ವಿದ್ಯಾರ್ಥಿಗಳು ನೋಂದಾಯಿಸಿ, 2046 ಹಾಜರಾಗಿ, 9 ವಿದ್ಯಾರ್ಥಿಗಳು ಗೈರಾಗಿರುತ್ತಾರೆ. ಕುಂದಾಪುರ ತಾಲೂಕಿನಲ್ಲಿ 2683 ವಿದ್ಯಾರ್ಥಿಗಳು ನೋಂದಾಯಿಸಿದ್ದು, 2666 ಪರೀಕ್ಷೆಗೆ ಹಾಜರಾಗಿ, 17 ಮಂದಿ ಗೈರು, ಕಾರ್ಕಳ ತಾಲೂಕಿನಲ್ಲಿ 2675 ಮಂದಿ ಪರೀಕ್ಷೆಗೆ ನೋಂದಾಯಿಸಿ, 2657 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 18 ಜನ ಗೈರು, ಬ್ರಹ್ಮಾವರ ತಾಲೂಕಿನಲ್ಲಿ 2759 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 2727 ಮಂದಿ ಪರೀಕ್ಷೆ ಬರೆದಿದ್ದು, 32 ಜನ ಗೈರು ಹಾಗೂ ಉಡುಪಿ ತಾಲೂಕಿನಲ್ಲಿ 3529 ಮಂದಿ ಪರೀಕ್ಷೆಗೆ ನೋಂದಾಯಿಸಿ, 3510 ಜನ ಹಾಜರಾಗಿ, 19 ಗೈರುರಾಗಿರುತ್ತಾರೆ.

ಈ ಸಂದರ್ಭದಲ್ಲಿ ನಿಟ್ಟೂರು ಹೈಸ್ಕೂಲ್‌ನ ಮಾನಸಿಕ ವಿಕಲಚೇತನ ವಿದ್ಯಾರ್ಥಿನಿ ಮಧು ಕಂಕನವಾಡಿ ಪರವಾಗಿ 9 ನೇತರಗತಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಪರೀಕ್ಷೆ ಬರೆದರೆ, ನಿನ್ನೆಯಷ್ಟೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದ ಪರ್ಕಳ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿನಿ ಭವಿಷ್ಯ ಅವರು ಸ್ತುತಿ ಶೆಟ್ಟಿ ಸಹಾಯದಿಂದ ಪರೀಕ್ಷೆ ಬರೆದಿದ್ದು, ವಿಶೇಷವಾಗಿತ್ತು. ಇವರನ್ನು ಜಿಲ್ಲಾಧಿಕಾರಿಗಳಾದ ಡಾ.ಕೆ ವಿದ್ಯಾಕುಮಾರಿ ವೀಕ್ಷಿಸಿ, ಶುಭ ಹಾರೈಸುವುದರ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಗಣಪತಿ, ಶಿಕ್ಷಣಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಇತರರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *