
ಉಡುಪಿ : ಹಿರಿಯಡಕದ ಪುರಾತನ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವ ಸನ್ನಿಧಿಯಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಗಾಳಿಗೆ, ದೇವಳದ ಧ್ವಜಸ್ತಂಭವು ಬುಡಸಮೇತ ಧರೆಗುರುಳಿದ ಘಟನೆ ನಡೆದಿದೆ.
ವಾರ್ಷಿಕ ರಥೋತ್ಸವದ ಅಂಗವಾಗಿ ಕೆಲ ದಿನಗಳ ಹಿಂದಷ್ಟೇ ಧ್ವಜಾರೋಹಣಗೊಂಡಿದ್ದ ಸ್ತಂಭವು ನೆಲಕ್ಕುರುಳಿದಾಗ ಎಲ್ಲರೂ ಶಾಕ್ ಗೊಳಗಾಗಿದ್ದರು.ಈ ಸಮಯದಲ್ಲಿ ತಾತ್ಕಾಲಿಕವಾಗಿ ಅಡಿಕೆ ಮರವನ್ನೇ ಧ್ವಜಸ್ತಂಭವಾಗಿ ಪ್ರತಿಷ್ಠಾಪಿಸಿ, ಶಾಸ್ರೋಕ್ತವಾಗಿ ಧಾರ್ಮಿಕ ವಿಧಿಗಳನ್ನು ಪೂರೈಸಿ ದೇವರಿಗೆ ಕಲಶ ಪ್ರೋಕ್ಷಣೆಗೈದು, ಶ್ರೀಹರಿಯ ರಥೋತ್ಸವವನ್ನು ಯಾವುದೇ ವಿಘ್ನಗಳಿಲ್ಲದೆ ಸಾಗಿಸಲಾಗಿರುವ ಕುರಿತು ವರದಿಯಾಗಿದೆ.