ಉಡುಪಿ: ಮದ್ಯವ್ಯಸನಿಯಾಗಿದ್ದ ನಿಟ್ಟೂರಿನ ದೀಕ್ಷಿತ್ ಆರ್. (26) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು 10ನೇ ತರಗತಿ ವಿದ್ಯಾಭ್ಯಾಸದ ಬಳಿಕ ಪೈಂಟಿಂಗ್ ಕೆಲಸವನ್ನು ನಿಟ್ಟೂರು ಪರಿಸರದಲ್ಲಿ ಮಾಡಿಕೊಂಡಿದ್ದರು.
2-3 ವರ್ಷಗಳಿಂದ ಮದ್ಯವ್ಯಸನಿಯಾಗಿದ್ದು, 3-4 ತಿಂಗಳಿನಿಂದ ಕುಡಿತ ಬಿಟ್ಟಿದ್ದರು. ಜು. 14ರಂದು ರಾತ್ರಿ ಮತ್ತೆ ಮದ್ಯ ಸೇವಿಸಿ ಬಂದು ವಿನಾಕಾರಣ ಮನೆಯಲ್ಲಿ ಗಲಾಟೆ ಮಾಡಿದ್ದರು. ರಾತ್ರಿ 1 ಗಂಟೆಯವರೆಗೂ ಮನೆಯಲ್ಲಿಯೇ ಇದ್ದು ಅನಂತರ ಹೊರಗಡೆ ಹೋಗಿದ್ದರು. ಬೆಳಗ್ಗೆ ಹುಡುಕಾಡಿದಾಗ ಮನೆಯ ಪಕ್ಕದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲ್ಬಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




