UGC-NET ಜೂನ್ 2025 ಪರೀಕ್ಷೆಯ ಫಲಿತಾಂಶ ಬಿಡುಗಡೆ ದಿನಾಂಕವನ್ನು NTA ಪ್ರಕಟಿಸಿದ್ದು, ಫಲಿತಾಂಶವನ್ನು ಜು. 22 ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಜು. 22ರಂದು ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ, ತಮ್ಮ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು. ದೇಶಾದ್ಯಂತದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜೂ. 25 – ಜೂ. 29 ರವರೆಗೆ ಈ ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರವನ್ನು ಜು.5 ರಂದು ಬಿಡುಗಡೆ ಮಾಡಲಾಗಿದೆ.




