ಉಳ್ಳಾಲ: ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಫಜೀರು ಗ್ರಾಮದ ಕೈಗಾರಿಕ ಪ್ರದೇಶದಲ್ಲಿ ನಿಷೇಧಿತ ಎಂಡಿಎಂಎಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಮಂಗಳೂರು ನಗರದ ದಕ್ಷಿಣ ಉಪವಿಭಾಗದ ಆ್ಯಂಟಿ ಡ್ರಗ್ ಟೀಮ್ 50 ಗ್ರಾಂ ಮಾದಕ ವಸ್ತು ಸಹಿತ ಮಾರಾಟಕ್ಕೆ ಬಳಸಿದ್ದ ಕಾರು ಸಹಿತ ಸುಮಾರು 7.76 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ತಲಪಾಡಿಯ ಮರಿಯಾ ಚರ್ಚ್ ಕಾಂಪೌಂಡ್ ನಿವಾಸಿ ಗೌತಮ್(22), ಕುಂಪಲ ಹನುಮಾನ್ ಟೆಂಪಲ್ ಬಳಿಯ ನಿವಾಸಿ ಕಾರ್ತಿಕ್ (27), ತೊಕ್ಕೊಟ್ಟು ಒಳಪೇಟೆಯ ಗಣೇಶ್‌ನಗರ ನಿವಾಸಿ ನಿಖಿಲ್ ಬಂಧಿತರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು. 1.5 ಲಕ್ಷ ರೂ ಮೌಲ್ಯದ 5 ಗ್ರಾಂ ಎಂಡಿಎಂಎ ಮಾದಕ ವಸ್ತು, ಬಿಳಿ ಬಣ್ಣದ ಕಾರು, ಮೂರು ಮೊಬೈಲ್, ಡಿಜಿಟಲ್ ತೂಕಮಾಪನ ಹಾಗೂ ಗಾಜಿನ ನಳಿಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.