ಕೇಂದ್ರ ಸಚಿವ ಸುರೇಶ್ ಗೋಪಿ ಕುಂಬಳೆಗೆ ಭೇಟಿ; ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಪರ ಗೋಡೆ ಬರಹ

Share with

ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಪ್ರಚಾರಾರ್ಥ ಕೇಂದ್ರ ಸಚಿವ ಸುರೇಶ್‌ಗೋಪಿ ಇಂದು ಬೆಳಿಗ್ಗೆ ಕುಂಬಳೆಗೆ ಆಗಮಿಸಿ ದ್ದಾರೆ. ಕುಂಬಳೆಯಲ್ಲಿ ಕೆ. ಸುರೇಂದ್ರನ್‌ರಿಗೆ ಮತ ಯಾಚಿಸಿ ಸುರೇಶ್ ಗೋಪಿ ಗೋಡೆ ಬರಹ ನಡೆಸಿದರು. ಈ ವೇಳೆ ಅಭ್ಯರ್ಥಿ ಕೆ.ಸುರೇಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ನೇತಾರರು ಸಹಿತ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಸುರೇಶ್ ಗೋಪಿ ಕಾಸರಗೋಡಿಗೆ ತೆರಳಿದರು. ಕಾಸರಗೋಡು ಮಂಡಲದಲ್ಲಿ ಬಿಜೆಪಿಯ ಗೆಲುವಿಗಾಗಿ ಗೋಡೆ ಬರಹ ನಡೆಸಲಿದ್ದಾರೆ.

ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಪ್ರಚಾರ ಚುರುಕುಗೊ ಳಿಸಿದ್ದಾರೆ. ಈಗಾಗಲೇ ಮತದಾರ ರನ್ನು ನೇರವಾಗಿ ಭೇಟಿಯಾಗಿ ಮತ ಯಾಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಜೆಪಿ ನೇತಾರರು ಕುಂಬಳೆ ಸಹಿತ ಜಿಲ್ಲೆಗೆ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *