ಕೋಡಿಂಬಾಡಿಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ..! ಮೊಬೈಲ್ ಫೋನ್, ಟ್ಯಾಬ್ ವಶ

Share with

ಪುತ್ತೂರು: ಕೋಡಿಂಬಾಡಿ ಗ್ರಾಮದ ಪಚ್ಚಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕಾಣಿಸಿಕೊಂಡಿರುವುದು ಇದೀಗ ಅನುಮಾನಕ್ಕೆ ಈಡಾಗಿದೆ.

ಮಾ.22ರಂದು ಪಚ್ಚಾಡಿಯ ಮನೆಯೊಂದರ ಪಕ್ಕದ ಗುಡ್ಡ ಪ್ರದೇಶದಲ್ಲಿ ಕೆಂಪು ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯೋರ್ವ ಸ್ವಲ್ಪ ಹೊತ್ತು ಕಂಡು ಬಂದಿದ್ದು ಬಳಿಕ ನಾಪತ್ತೆಯಾಗಿದ್ದಾನೆ. ಈತನನ್ನು ಸಮೀಪದ ಮನೆಯವರು ನೋಡಿದ್ದರು.

ನಂತರ ಸ್ಥಳಕ್ಕೆ ಹೋಗಿ ಸ್ಥಳೀಯರು ಪರಿಶೀಲಿಸಿದಾಗ ಎರಡು ಮೊಬೈಲ್ ಫೋನ್ ಮತ್ತು ಟ್ಯಾಬ್ ದೊರೆತಿದೆ. ಕೂಡಲೇ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೊಬೈಲ್ ಫೋನ್ ಮತ್ತು ಟ್ಯಾಬ್ ವಶಕ್ಕೆ ಪಡೆದುಕೊಂಡಿದ್ದಾರೆ.

ಫೋನ್ ಹಾಗೂ ಟ್ಯಾಬ್‌ ಆಧಾರದಲ್ಲಿ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.


Share with

Leave a Reply

Your email address will not be published. Required fields are marked *