ಉಡುಪಿ: ಇಲ್ಲಿನ ಹಲವೆಡೆ ಉಪಲೋಕಾಯುಕ್ತ ದಿಢೀರ್ ದಾಳಿ ನಡೆಸಿ, ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಜೀನ್ಸ್ ಪ್ಯಾಂಟ್ ಧರಿಸಿ ಬಂದ ಸರ್ಕಾರಿ ನೌಕರರ ಬೆವರಿಳಿಸಿದರು. ಚಿಟ್ ಫಂಡ್ ದಾಖಲೆ ಹಿಡಿದುಕೊಂಡು ಬಂದಿದ್ದ ಸರ್ಕಾರಿ ನೌಕರರ ವಿರುದ್ಧ ಗರಂ ಆದರು.
ಮಂಜುರಾದ ಸರ್ಕಾರಿ ಭೂಮಿಗಾಗಿ ಮಾಜಿ ಸೈನಿಕನು ಅಲೆದಾಡುತ್ತಿರುವ ಮಾಜಿ ಸೈನಿಕರ ಸಂಕಷ್ಟವನ್ನು ಲೋಕಾಯುಕ್ತ ಕೇಳಿತು. ತಾಂತ್ರಿಕ ದೋಷ ಸರಿಪಡಿಸಿ ತಕ್ಷಣವೇ ಭೂಮಿ ಮಂಜೂರು ಮಾಡುವಂತೆ ಸೂಚನೆ ನೀಡಿತು. ನೌಕರನೊಬ್ಬ ತನ್ನ ವೈಯಕ್ತಿಕ ಬ್ಯಾಗ್‌ನಲ್ಲಿ ಸಾಲ ಇಟ್ಟುಕೊಂಡಿದ್ದ. ನೌಕರನನ್ನು ಅಮಾನತು ಮಾಡುವಂತೆ ಸೂಚನೆ ನೀಡಲಾಗಿದೆ.
ಸರ್ವೇ ಕಚೇರಿಯಲ್ಲಿ ಅಸಮರ್ಪಕ ದಾಖಲೆ ಕಂಡು ನೌಕರರ ವಿರುದ್ಧ ಗರಂ ಆದರು. ಬೆಳ್ಳಂಬೆಳಗ್ಗೆ ಮಲ್ಪೆ ಬಂದರು ಪ್ರದೇಶದ ಮೇಲೂ ದಾಳಿ ನಡೆಸಲಾಯಿತು. ಸಮುದ್ರ ಸೇರುತ್ತಿರುವ ಕೊಳಕು ನೀರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಯಿತು. ಕೊಳಕು ನೀರು ತಿಂದ ಮೀನುಗಳು ದೇಶಕ್ಕೆಲ್ಲ ಸರಬರಾಜಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದೆ.




