ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಐತ್ತಪ್ಪ ಶೆಟ್ಟಿ[85] ಅಲ್ಪ ಕಾಲದ ಅಸೌಖ್ಯದಿಂದ ಜ.29ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲಕ್ಷ್ಮಿ ಮಕ್ಕಳಾದ ಬಾಲಕೃಷ್ಣ, ಸೀತಾರಾಮ, ಸದಾನಂದ, ನವೀನ, ಹರೀಶ, ಮೋಹನ, ರಾಜೇಶ್ವರಿ, ಸೊಸೆಯಂದಿರಾದ ಸುನಿತಾ, ಆಶಾ, ಶ್ಯಾಮಲಾ, ಭಾರತಿ, ಶ್ರುತಿ, ಅಳಿಯ ತಿಲಕ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರ ನಿನ್ನೆ ರಾತ್ರಿ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು. ಮನೆಗೆ ಬಿಜೆಪಿ ನೇತಾರರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಶಿವಶಕ್ತಿ ಪ್ರೆಂಡ್ಸ್ ಕ್ಲಬ್, ಜೈ ಹನುಮಾನ್ ಪ್ರೆಂಡ್ಸ್ ಕ್ಲಬ್, ಶ್ರೀ ಗೌರೀ ಗಣೇಶ ಭಜನಾ ಮಂದಿರ ಸಮಿತಿ ಪ್ರತಾಪನಗರ ಸಂತಾಪ ಸೂಚಿಸಿದೆ.