ಉಪ್ಪಳ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ದೀಪಾವಳಿಯನ್ನು ಕಾಸರಗೋಡಿನ ನೀರ್ಚಾಲು ಬಳಿಯ ಕನ್ನೆಪ್ಪಾಡಿ “ಆಶ್ರಯ ಆಶ್ರಮ”ದಲ್ಲಿ ಗೋಪೂಜೆ ಜರಗಿ, ವೃದ್ಧರು ಹಾಗೂ ಮಕ್ಕಳ ಜೊತೆ ಸಿಹಿ ಹಂಚಿ, ನಕ್ಷತ್ರಕಡ್ಡಿ ಉರಿಸಿ ಆಚರಿಸಲಾಯಿತು.


ಈ ಕಾರ್ಯಕ್ರದಲ್ಲಿ ಯೂನಿಟ್ ಉಪಾಧ್ಯಕ್ಷರಾದ ಶ್ರೀ ಗಣೇಶ್ ರೈ ಮಧೂರು ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮು ವಿಡಿಯೋ, ವಲಯ ಜತೆ ಕಾರ್ಯದರ್ಶಿ ಮನು ಎಲ್ಲೋರ, ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ, ಕೋಶಾಧಿಕಾರಿ ಅಮಿತ್, ಜತೆ ಕಾರ್ಯದರ್ಶಿ ವಿಶಾಖ್ ಪಾಲ್ಗೊಂಡರು. ಯುನಿಟ್ ವತಿಯಿಂದ ಆಶ್ರಮಕ್ಕೆ ತರಕಾರಿ ನೀಡಲಾಯಿತು. ಆಶ್ರಯ ಪಡೆಯುವ ಎಲ್ಲಾ ವೃದ್ಧರು ಮಕ್ಕಳು ಸಂತೋಷ ವ್ಯಕ್ತಪಡಿಸಿದರು. ಆಶ್ರಮದ ಸದಸ್ಯರಾದ ಜಯರಾಮ ಅವರು ನಮ್ಮನ್ನು ಸ್ವಾಗತಿಸಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟರು.




