ಉಪ್ಪಳ: ಬಿ.ಎಂ.ಎಸ್ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಮಂಗಲ್ಪಾಡಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನ.17ರಂದು ಧರಣಿ ನಡೆಸಲಾಯಿತು.
ಬಿ.ಎಂ.ಎಸ್ ಪಂಚಾಯತ್ ಸಮಿತಿ ಅಧ್ಯಕ್ಷ ನಳಿನಾಕ್ಷ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಉದ್ಘಾಟಿಸಿದರು. ಕಾರ್ಮಿಕರ ಬೇಡಿಕೆಗೆ ಯಾವುದೇ ಬೆಲೆ ಕಲ್ಪಿಸದ ಸರಕಾರದ ಅವಗಣನೆಗೆ ಎದುರಾಗಿ ಈ ಪ್ರತಿಭಟನೆ ಎಂದು ವಿವರಿಸಿದರು.
ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ .ಪಿ ಬಂಬ್ರಾಣ ಮಾತನಾಡಿ ಕೃಷಿಕಾರ್ಮಿಕರಿಗೆ ನೀಡಬೇಕಾದ ಪಿಂಚಣಿಯನ್ನು ನೀಡಿ, ಸಮಯಕ್ಕೆ ಅನು ಸಾರವಾಗಿ ಹೆಚ್ಚಳಗೊಳಿಸಿ 5000 ವಾಗಿ ನೀಡಬೇಕು. ಅವರು ನಿಕ್ಷೇಪಿಸಿದ ಮೊತ್ತವನ್ನು ಅವರಿಗೆ ನಿವೃತ್ತರಾಗುವ ಸಮಯದಲ್ಲಿ ಹಿಂದಿರುಗಿಸಬೇಕು. ಕ್ಷೇಮ ಬರ‍್ಡಿನಿಂದಲೇ ಪಿಂಚಣಿ ನೀಡುವಂತೆ ಸರಕಾರ ಕಾರ್ಯಪ್ರರ‍್ತರಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ವಿವರಿಸಿದರು. ರಾಘವೇಂದ್ರ .ಪಿ, ಸ್ವಾಗತಿಸಿ, ಕಿಶೋರ್ ವಂದಿಸಿದರು. ಗಣೇಶ್, ಲೊಕೇಶ್ ಬಾಡೂರು, ಶಿಶಿಧರ, ಸತ್ಯನಾರಾಯಣ ಮುಂತಾದವರು ನೇತೃತ್ಯ ನೀಡಿದರು.