ಉಪ್ಪಳ: ಬೇಕೂರು ಬೊಳುವಾಯಿ ನಿವಾಸಿ ಹಿರಿಯ ಕೃಷಿಕ ಕಮ್ಯೂನಿಸ್ಟ್ ಪಕ್ಷದ ಹಿತೈಷಿ ಬಾಬು ಶೆಟ್ಟಿ [65] ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಮಕ್ಕಳಾದ ಪುನಿತ, ಚೈತ್ರ, ಹರ್ಷಿತ್, ಅಳಿಯಂದಿರಾದ ಕಿಶೋರ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಸಹೋದರರಾದ ಮಾಧವ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಸಹೋದರಿ ಶೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪತ್ನಿ ಜಯಂತಿ, ಓರ್ವ ಸಹೋದರ ಬಂಟಪ್ಪ ಶೆಟ್ಟಿ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಸಿ.ಪಿ.ಎಂ ಬೇಕೂರು ಬ್ರಾಂಚ್ ಕಮಿಟಿ, ಯುವಶಕ್ತಿ ಪ್ರೆಂಡ್ಸ್ ಸರ್ಕಲ್ ಲೈಬ್ರೆರಿ ಸುಭಾಸ್‌ನಗರ ಸಂತಾಪ ಸೂಚಿಸಿದೆ.