ಉಪ್ಪಳ: ಬಿಜೆಪಿ ಕುಂಬ್ಳೆ ಮಂಡಲ ಕಮಿಟಿ ಆಶ್ರಯದಲ್ಲಿ ಪಕ್ಷದ ಸ್ನೇಹ ಯಾತ್ರೆಯ ಅಂಗವಾಗಿ ಮಂಗಲ್ಪಾಡಿ ಪಂಚಾಯತಿನ ಬಂದ್ಯೋಡ್ ಬನ್ ಡ್ರಿಕ್ ಡಿ ಅಲ್ಮೇಡ ಇವರ ಮನೆಗೆ ಭೇಟಿ ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರುವ ಕರಪತ್ರ ನೀಡಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಕರ್ಷಕ ಮೋರ್ಛಾ ಮಂಡಲ ಅಧ್ಯಕ್ಷ ಭರತ್ ರೈ ಭಾಗವಹಿಸಿದ್ದರು.