ಉಪ್ಪಳ: ಸುಬ್ಬಯ ಕಟ್ಟೆ ಬಿ.ಎ ಮೊಹಮ್ಮದ್ ಸ್ಮಾರಕ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರದಲ್ಲಿ ನಡೆದ ಸೃಜನೋತ್ಸವ ಕಾರ್ಯಕ್ರಮವನ್ನು ಕೇರಳ ರಾಜ್ಯ ಗ್ರಂಥಾಲಯ ಸಮಿತಿ ಸದಸ್ಯರಾದ ಅಹಮ್ಮದ್ ಹುಸೈನ್ ಮಾಸ್ಟರ್ ರವರು ನಿರ್ವಹಿಸಿದರು ಗ್ರಂಥಾಲಯದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ತಾಲೂಕು ಗ್ರಂಥಾಲಯ ಸಮಿತಿ ಅಧ್ಯಕ್ಷರೂ ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರೂ ಆದ ಅಬ್ದುಲ್ಲರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಗ್ರಂಥಾಲಯದ ಪ್ರಧಾನ ಕಾರ್ಯದರ್ಶಿ ಬಿ.ಎ ಲತೀಫ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪುಷ್ಪಾ ಕಮಲಾಕ್ಷ, ಮೊಹಮ್ಮದ್, ಪ್ರಮೀದಾ , ಖಲೀಲ್ ಮೊದಲಾದವರು ಶುಭ ಹಾರೈಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆತ್ಮಿಕಾ ಸೋಲಿಯಾ, ದೀಪಶ್ರೀ, ಅಬ್ದುಲ್ಲಾ ಹೀಗೆ ಹಲವಾರು ಮಕ್ಕಳಿಂದ ವಿಜೇತ ಮಕ್ಕಳನ್ನು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಗ್ರಂಥಾಲಯ ಸಹಾಯಕಿ ನಳಿನಾಕ್ಷಿಯವರ ವಂದನಾರ್ಪಣೆಯೊಂದಿಗೆ ರಾಷ್ಟ್ರಗೀತೆಯ ಜೊತೆ ಕಾರ್ಯಕ್ರಮ ಸಂಪನ್ನಗೊಂಡಿತು.