ಉಪ್ಪಳ: ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಫೆಬ್ರವರಿ 9 ಮತ್ತು 10ರಂದು ನಡೆಯಲಿರುವ ವಾರ್ಷಿಕ ಬಲಿವಾಡು ಕೂಟದ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮೊಕ್ತೇಸರರಾದ ಶಂಕರನಾರಾಯಣ ಕುಬಣೂರಾಯರವರು ಜಯಂತಿ ಸಂಜೀವ ಶೆಟ್ಟಿ ಮುಂಬಯಿ ಇವರಿಗೆ ನೀಡುವುದರ ಮೂಲಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ಹರಿನಾಥ ಭಂಡಾರಿ ಒಡ್ಡಂಬೆಟ್ಟು ಗುತ್ತು, ದುಗ್ಗಪ್ಪ ಶೆಟ್ಟಿ ತಿಂಬರ, ಉಮೇಶ್ ಶೆಟ್ಟಿ, ದೇವದಾಸ ಸಾಲ್ಯಾನ್, ಅರ್ಚಕರಾದ ಶಂಕರನಾರಾಯಣ ಭಟ್, ಸೇವಾ ಸಮಿತಿಯ ಅಧ್ಯಕ್ಷರಾದ ರಮೇಶ್ ಆಳ್ವ ತಿಂಬರ, ಉತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ಎಮ್ ಕುಬಣೂರು, ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಶ್ಮಿತಾ ಶೆಟ್ಟಿ ತಿಂಬರ ಉಪಸ್ಥಿತರಿದ್ದರು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಮತ್ತು ವಾರ್ಷಿಕ ಜಾತ್ರೆಯನ್ನ ಯಶಸ್ವಿಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಮಾ.ಅಜಿತ್ ಕುಮಾರ್ ಪ್ರಾರ್ಥನೆ ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ರಾಮಚಂದ್ರ ಬಲ್ಲಾಳ್ ಸ್ವಾಗತಿಸಿದರು, ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಗುತ್ತು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ವಸಂತ ಕುಮಾರ್ ಮಯ್ಯ ಧನ್ಯವಾದ ನೀಡಿದರು ಗುರುಪ್ರಸಾದ್ ಹೊಳ್ಳ ತಿಂಬರ ಇವರು ಆಮಂತ್ರಣ ಪತ್ರಿಕೆಯ ವಿದ್ಯುನ್ಮಾನ ಪ್ರತಿಯನ್ನು ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರಿಗೆ ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮೂಲಕ ಕಳಿಸುವ ಮೂಲಕ ಬಿಡುಗಡೆ ಮಾಡಿದರು.