ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆದ ವಿಷು ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕ ಬೆಡಿ ಉತ್ಸವದಂದು ಐಲ ಮೈದಾನದಲ್ಲಿ ವಿವಿಧ ಕುಣಿತ ಭಜನಾ ತಂಡಗಳ ಸಮ್ಮಿಲನದೊಂದಿಗೆ ಏಕಕಾಲದಲ್ಲಿ ನಡೆದ ವಿರಾಟ್ ನೃತ್ಯ ಭಜನಾ ಸಂಭ್ರಮ ಎಲ್ಲರ ಗಮನವನ್ನು ಸೆಳೆಯಿತು.
ಸುಮಾರು 21 ಕುಣಿತ ಭಜನ ತಂಡಗಳ ನೂರಾರು ಸಂಖ್ಯೆಯಲ್ಲಿ ಪುಟಾಣಿ ಮಕ್ಕಳ ಸಹಿತ ಮಾತೆಯರು ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ ನೃತ ಭಜನೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಮಂದಿ ಭಜನೆ ಹಾಗೂ ಬೆಡಿ ಉತ್ಸವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.