
ಉಪ್ಪಳ: ಪೈವಳಿಕೆಯ ಜೋಡುಕಲ್ಲಿನಲ್ಲಿ ಥಾರ್ ಜೀಪು ಢಿಕ್ಕಿ ಹೊಡೆದು ಬೈಕ್ ಸವಾರ ಶಿವಮೊಗ್ಗ ನಿವಾಸಿ ಉಪ್ಪಳ ಪ್ರತಾಪನಗರ ಪುಳಿಕುತ್ತಿಯಲ್ಲಿ ವಾಸಿಸುತ್ತಿರುವ ಅಬ್ದುಲ್ ಗಫಾರ್ ಬಯಾಸಾಗಿ (35)
ಸಾವಿಗೀಡಾದರು.
ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.