ಮಾಲಿನ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಾಡುಗೊಂಡ ಉಪ್ಪಳ ಬಸ್ ನಿಲ್ದಾಣ ಕಟ್ಟಡ

Share with

ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಚೀಕರಣಕ್ಕೆ ವ್ಯವಸ್ಥಿತ ಕ್ರಮಕೈಗೊಳ್ಳದಿರುವುದರಿಂದ ಪೇಟೇ ಸಹಿತ ಒಳರಸ್ತೆಗಳಲ್ಲಿ ತ್ಯಾಜ್ಯ ರಾಶಿಯಿಂದ ದುರ್ವಾಸನೆ ಉಂಟಾಗುತ್ತಿರುವುದು ಮಳೆ ಗಾಲದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಸ್ಥಳೀಯರನ್ನು ಕಾಡುತ್ತಿರುವಂತೆ ಯೇ ಪಂಚಾಯತ್‌ನ ಉಪ್ಪಳ ಬಸ್ ನಿಲ್ದಾಣದ ಕಟ್ಟಡ ಕೂಡಾ ತ್ಯಾಜ್ಯ ಸಂಗ್ರಹದ ಕೇಂದ್ರವಾಗಿ ಮಾರ್ಪಾಡುಗೊಂಡಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಬಸ್‌ನಿಲ್ದಾಣದ ಕಟ್ಟಡದ ಮೇಲ್ಭಾಗದಲ್ಲಿ ವರ್ಷಗಳ ಹಿಂದೆ ಪರಿಸರದಿಂದ ಸಂಗ್ರಹಿಸಿದ ಭಾರೀ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತುಂಬಿಸಿ ಇರಿಸಲಾಗಿತ್ತು. ಆದರೆ ಇದೀಗ ಎರಡು ವರ್ಷ ಕಳೆದರೂ ಅಧಿಕಾರಿಗಳ ವರ್ಗ ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳುತ್ತಿಲ್ಲವೆಂದು ಆರೋಪ ಉಂಟಾಗಿದೆ. ಮಳೆಗೆ ತ್ಯಾಜ್ಯ ಕೊಳೆತು ದುರ್ಗಂಧದಿoದ ಮಾರಕ ರೋಗ ಉಂಟಾಗುವ ಭೀತಿ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಗಾಳಿಗೆ ತ್ಯಾಜ್ಯದ ಚೂರುಗಳು ನಿಲ್ದಾಣ ಪೂರ್ತಿ ಚೆಲ್ಲಾಪಿಲ್ಲಿಗೊಳ್ಳುತ್ತಿದೆ. ಈ ಕಟ್ಟಡದಲ್ಲಿ ಹೋಟೇಲ್ ಸಹಿತ ಹಲವಾರು ವ್ಯಾಪಾರ ಸಂಸ್ಥೆಗಳು ಕಾರ್ಯಚರಿಸುತ್ತಿದ್ದು, ದಿನನಿತ್ಯ ಶಾಲಾ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ನಿಲ್ದಾಣ ತಲುಪುತ್ತಿದ್ದಾರೆ. ಇಲ್ಲಿನ ಶೌಚಾಲಯದಲ್ಲಿ ಬೆಳಕಿನ ವ್ಯಯಿಲ್ಲ ಹಾಗೂ ನೀರಿನ ಸಮಸ್ಯೆ ಕೂಡಾ ಕಾಡುತ್ತಿದ್ದು, ತೀರಾ ಸಮಸ್ಯೆಗೆ ಕಾರಣವಾಗಿದೆ. ಸಂಬoಧಪಟ್ಟ ಪಂಚಾಯತ್ ಅಧಿಕಾರಿಗಳು, ಆರೋಗ್ಯ ಇಲಾಖೆ ಕೂಡಲೇ ಕಟ್ಟಡ ಸಹಿತ ಪರಿಸರದಲ್ಲಿ ತುಂಬಿಕೊoಡಿರುವ ಮಾಲಿನ್ಯವನ್ನು ತೆರವಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *