ಉಪ್ಪಳ: ಮಂಗಲ್ಪಾಡಿ ಪಂಚಾಯತ್ನ ಉಪ್ಪಳ ಬಸ್ ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲಮಯವಾಗಿ ಆತಂಕದ ವಾತಾವರಣ ಉಂಟಾಗಿದ್ದು, ಬೀದಿ ದೀಪಗಳನ್ನು ಸ್ಥಾಪಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆ ಬಸ್ ನಿಲ್ದಾಣದ ಹೆದ್ದಾರಿ ಬದಿಯಲ್ಲಿದ್ದ ಬೀದಿ ದೀಪಗಳನ್ನು ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಹಲವಾರು ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಪೋಲೀಸ್ ಕಂಟ್ರೋಲ್ ರೂಮ್ ಅಲ್ಲದೆ ರಾತ್ರಿ ಹೊತ್ತಲ್ಲಿ ಜನರ ಸಂಚಾರಯಿದ್ದು ಕತ್ತಲೆಯಿಂದ ಸಮಸ್ಥೆಯಾಗಿದೆ. ವ್ಯಾಪಾರ ಸಂಸ್ಥೆ ತೆರೆದಿರುವ ತನಕ ಅಲ್ಪ ಬೆಳಕಿದೆ. ಆದರೆ ಮುಚ್ಚಿದ ಬಳಿಕ ಕತ್ತಲೆಯಿಂದ ಬಿಕೋ ಎನಿಸುತ್ತಿದೆ. ಸಂಬoಧಪಟ್ಟ ಅಧಿಕೃತರು ನಿಲ್ದಾಣದ ಒಳಗಡೆ ದೀಪ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.