ಉಪ್ಪಳ ಬಸ್‌ನಿಲ್ದಾಣದಲ್ಲಿರುವ ಶೌಚಾಲಯ ದುರಸ್ಥಿ ಕೆಲಸಗಳು ಆರಂಭ: ಒಂದು ವಾರ ತನಕ ಶೌಚಾಲಯ ಮುಚ್ಚುಗಡೆ

Share with


ಉಪ್ಪಳ:  ಉಪ್ಪಳ ಬಸ್ ನಿಲ್ದಾಣದಲ್ಲಿ ಕಾರ್ಯಾಚರಿಸುತ್ತಿರುವ ಶೌಚಾಲಯದಲ್ಲಿ ದುರಸ್ಥಿ ಹಾಗೂ ಅಭಿವೃದ್ದಿ ಕೆಲಸಗಳು ಆರಂಭಗೊoಡಿದೆ. ವಾರ್ಡ್ ಸದಸ್ಯ ಶರೀಫ್‌ರವರ ನೇತೃತ್ವದಲ್ಲಿ  ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವಾರದ ತನಕ  ಶೌಚಾಲಯ ಮುಚ್ಚುಗಡೆಗೊಳ್ಳಲಿದೆ. ಮಂಗಲ್ಪಾಡಿ ಪಂಚಾಯತ್ ಹಾಗೂ ಸುಚಿತ್ವ ಮಿಷನ್ ಜಂಟಿಯಾಗಿ ಸುಮಾರು 3ಲಕ್ಷ ರೂ ವಚ್ಚದಲ್ಲಿ ದುರಸ್ಥಿಹಾಗೂ ಅಭಿವೃದ್ದಿ ಕೆಲಸಗಳು ನಡೆಯುತ್ತಿರುವುದಾಗಿ ವಾರ್ಡ್ ಸದಸ್ಯ ತಿಳಿಸಿದ್ದಾರೆ. ಶೌಚಾಲಯದ ಮಲಿನ ನೀರು ಸೋರಿಕೆಯಾಗುವ ಪೈಪ್, ವಯರಿಂಗ್, ಟೈಲ್ಸ್, ಪೈಂಟಿoಗ್ ಮೊದಲಾದ ದುರಸ್ಥಿ ಹಾಗೂ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಉಪ್ಪಳ ಪೇಟೆಯಲ್ಲಿ  ವ್ಯವಸ್ಥಿತವಾದ ಶೌಚಾಲಯಯಿಲ್ಲದೆ ಸಾರ್ವಜನಿಕರು ಸಮಸ್ಯೆಗೀಡಾಗುತ್ತಿದ್ದಾರೆ. ದಿನನಿತ್ಯ ಸಾವಿರಾರು ಮಂದಿ ತಲುಪು ಪೇಟೆಯಲ್ಲಿ ಸುಸಜ್ಜಿದವಾದ ಅತ್ಯಧಿಕ ಸೌಕರ್ಯಗಳನ್ನು ಹೊಂದಿರುವ ಶೌಚಾಲಯವನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *