ಉಪ್ಪಳ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಮಂದಿರದಲ್ಲಿ 16ನೇ ವಾರ್ಷಿಕೋತ್ಸವ ಹಾಗೂ ಚಂಡಿಕಾ ಹೋಮ ವಿವಿಧ ಕಾರ್ಯಕ್ರಮಗಳೊಂದಿಗೆ ನಾಳೆ[24-11-2023] ನಡೆಯಲಿದೆ.
ಬೆಳಿಗ್ಗೆ 6ಕ್ಕೆ ಪುಣ್ಯಾಹ, ಗಣಪತಿ ಹೋಮ, 8ಕ್ಕೆ ಚಂಡಿಕಾ ಹೋಮ ಪ್ರಾರಂಭ, ಮಧ್ಯಾಹ್ನ 11.30ಕ್ಕೆ ಹೋಮದ ಪೂರ್ಣಾಹುತಿ ಬಳಿಕ ಧಾರ್ಮಿಕ ಸಭೆ, ಅನ್ನದಾನ ನಡೆಯಲಿದೆ.
ಮಧ್ಯಾಹ್ನ 2.30ರಿಂದ 4.30ರ ತನಕ ಯಕ್ಷಗಾನ ವೈಭವ, 25ರಂದು ಸಂಜೆ 6.30ರಿಂದ 7.30ರ ತನಕ ಶಾಸ್ತ್ರೀಯ ಸಂಗೀತ, 7.30ರಿಂದ 9 ಗಂಟೆ ತನಕ ಕುಣಿತ ಭಜನೆ, ರಾತ್ರಿ 9ರಿಂದ 11ರ ತನಕ ಭರತ ನಾಟ್ಯ, ರಾತ್ರಿ 11ರಿಂದ 12ರ ತನಕ ಸ್ಥಳೀಯ ಪ್ರತಿಭೆಗಳಿಂದ ನೄತ್ಯ ಕಾರ್ಯಕ್ರಮ, ರಾತ್ರಿ 12ರಿಂದ ಶ್ರೀದುರ್ಗಾ ಕಲಾತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯಿಸುವ ಕಲ್ಜಿಗದ ಕಾಳಿ ಮಂತ್ರ ದೇವತೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.