ಉಪ್ಪಳ: ಮುಳಿಂಜ ಮಾಹಿ ಹಾಜಿ ರಸ್ತೆ ಬಳಿಯ ನಿವಾಸಿ ದೈವ ಕಲಾವಿದ ತಿಮ್ಮಪ್ಪ .ಎಂ [58) ನಾಪತ್ತೆಯಾಗಿದ್ದಾರೆ. ಈ ತಿಂಗಳ 27ರಂದು ಬೆಳಿಗ್ಗೆ ಮನೆಯಿಂದ ಹೋದವರು ಮರಳಿ ತಲುಪಲಿಲ್ಲ ಈ ಬಗ್ಗೆ ಇವರ ಪುತ್ರಿ ಅನಿತಾ ರವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.


ಕೇಸು ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಇವರನ್ನು 27ರಂದು ಸಂಜೆ ಕರ್ನಾಟಕದ ತಲಪಾಡಿ ಟೋಲ್ ಗೇಟ್ ನ ಸಿ ಸಿ ಕ್ಯಾಮೆರಾದಲ್ಲಿ ನಡೆದು ಹೋಗುತ್ತಿರುವ ದೃಶ್ಯ ಪತ್ತೆಯಾಗಿದೆ. ಎಲ್ಲಿ ಹೋಗಿರುವುದಾಗಿ ಮಾಹಿತಿ ಇಲ್ಲ. ಪೊಲೀಸರು, ಮನೆಯವರು ಹುಡುಕಾಟದಲ್ಲಿ ನಿರತರಾಗಿದ್ದಾರೆ.




