ಉಪ್ಪಳ: ಬಸ್ ನಿಲ್ದಾಣದಲ್ಲಿ ತ್ಯಾಜ್ಯ ರಾಶಿ; ಶುಚೀಕರಣಕ್ಕೆ ಒತ್ತಾಯ

Share with

ಉಪ್ಪಳ: ಉಪ್ಪಳ ಬಸ್‌ ನಿಲ್ದಾಣದೊಳಗೆ ತ್ಯಾಜ್ಯಗಳು ತುಂಬಿಕೊಂಡು ನಿಲ್ದಾಣಕ್ಕೆ ಬರುವ ಜನರಿಗೆ ಸಮಸ್ಯೆಯಾಗಿದೆ. ನಿಲ್ದಾಣದಲ್ಲಿ ಕುಳಿತುಕೊಳ್ಳುವ ಹಾಸನಗಳ ಪರಿಸರದಲ್ಲಿ ಭಾರೀ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಕೊಂಡಿರುವುದು ದುರ್ವಾಸನೆಗೆ ಕಾರಣವಾಗುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.

ಬಸ್ ನಿಲ್ದಾಣದಲ್ಲಿ ತ್ಯಾಜ್ಯ ರಾಶಿ

ನಿಲ್ದಾಣ ಶುಚೀಕರಣಕ್ಕೆ ಪಂಚಾಯತ್ ಯಾವುದೇ ಕ್ರಮಕೈಗೊಳ್ಳದಿರುವುದೇ ತ್ಯಾಜ್ಯಗಳು ತುಂಬಿಕೊಳ್ಳಲು ಕಾರಣವಾಗಿರುವುದಾಗಿ ಆರೋಪಿಸಲಾಗಿದೆ. ವೃದ್ದರು, ಮಹಿಳೆಯರ ಸಹಿತ ಹಲವಾರು ಮಂದಿ ಕುಳಿತುಕೊಳ್ಳುವ ಈ ಹಾಸನದ ಪರಿಸರದಲ್ಲಿ ತುಂಬಿಕೊಂಡ ತ್ಯಾಜ್ಯ ಅಸಯ್ಯವಾಗುತ್ತಿದೆ.

ಗ್ರಾಹಕರು ಅಂಗಡಿಯಿಂದ ಖರೀದಿಸಿದ ಆಹಾರವನ್ನು ತಿಂದು ಪ್ಲಾಸ್ಟಿಕ್‌ನ್ನು ಅಲ್ಲಿಯೇ ಎಸೆಯುತ್ತಿರುವುದರಿಂದ ಗಾಳಿಗೆ ಚೆಲ್ಲಾಪಿಲ್ಲಿಯಾಗಿ ಹರಡಲು ಕಾರಣವಾಗುತ್ತಿರುವುದಾಗಿ ದೂರಲಾಗಿದೆ. ತ್ಯಾಜ್ಯ ಹಾಕಲು ಡಸ್ಟ್ ಪಿನ್ ಇರಿಸಿದರೆ ಉತ್ತಮವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮಳೆಗಾಲದಲ್ಲಿ ಬಸ್ ನಿಲ್ದಾಣದೊಳಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ತೀರಾ ಶೋಚನೀಯವಸ್ಥೆಗೆ ತುಲುಪುತ್ತಿದ್ದು, ಪಂಚಾಯತ್ ಅಧಿಕಾರಿಗಳು ಶುಚೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *