ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಗ್ರಾಮ ಸಭೆ ಜ.4ರಂದು ಸಂಜೆ ಪ್ರತಾಪನಗರ ಶಿವಶಕ್ತಿ ಪ್ರೆಂಡ್ಸ್ ಕ್ಲಬ್‌ನಲ್ಲಿ ನಡೆಯಿತು.

ಪಂಚಾಯತ್ ಅಧ್ಯಕ್ಷೆ ಫಾತಿಮತ್ ರುಬೀನ, ವಿ.ಇ.ಒಗಳಾದ ಜೋನ್ಸನ್, ಶೀನಾ, ವಾರ್ಡ್ ಸದಸ್ಯೆ ಸುಧಾ.ವಿ.ವಿ, 4ನೇ ವಾರ್ಡ್ ಸದಸ್ಯ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಸಭೆಯಲ್ಲಿ 2024-25ನೇ ವರ್ಷದ ವಾರ್ಷಿಕ ಪದ್ದತಿಯನ್ನು ರೂಪೀಕರಿಸಲಾಯಿತು.

ಈ ವಾರ್ಡ್ನಲ್ಲಿ ಗ್ರಾಮಸಭೆ ನಡೆಸಲು ಕಟ್ಟಡ ಇಲ್ಲದಿರುವುದು ಸಮಸ್ಯೆಯಾಗಿದ್ದು, ಈ ಬಗ್ಗೆ ಚರ್ಚಿಸಲಾಯಿತು. ಕಟ್ಟಡ ನಿರ್ಮಾಣಕ್ಕಾಗಿ ವಾರ್ಡ್ ಸದಸ್ಯೆ ಅಧ್ಯಕ್ಷರನ್ನು ಒತ್ತಾಯಿಸಿದರು. ತಿಂಬರ ಅಂಗನವಾಡಿ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ಊರಿನ ಹಿರಿಯರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದರು.