ಉಪ್ಪಳ ಮನೆ ಕಳವು ಬೆರಳಚ್ಚು, ಶ್ವಾನದಳದಿಂದ ತಪಾಸಣೆ

Share with

ಉಪ್ಪಳ: ಉಪ್ಪಳದಲ್ಲಿ ಗಲ್ಪ್ ಉದ್ಯೋಗಿಯ ಮನೆ ಕಳವುಗೈದ ಪ್ರಕರಣಕ್ಕೆ ಸಂಬಂಧಿ ಮಂಜೇಶ್ವರ ಪೋಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಉಪ್ಪಳ ಪತ್ವಾಡಿ ರಸ್ತೆಯ ಮೊಹಮ್ಮದಲಿ ಸ್ಟಿçÃಟ್‌ನ ಗಲ್ಪ್ ಉದ್ಯೋಗಿಯಾದ ಅಬ್ದುಲ್ ರಜಾಕ್ ಎಂಬವರ ಬೀಗ ಹಾಕಲಾದ ಮನೆಯಿಂದ ೩೦ ಸಾವಿರ ಹಾಗೂ ೫ಪವನ್ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಕೆ.ರಾಜೀವ್ ಕುಮಾರ್ ನೇತೃತ್ವದಲ್ಲಿ ತನಿಖೆಯನ್ನು ಮುಂದುವರಿಸಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ತಪಾಸಣೆ ನಡೆಸಿದೆ. ಶ್ವಾನ ಮನೆಯಿಂದ ಪರಿಸರದ ರಸ್ತೆ ತನಕ ತೆರಳಿದೆ.

ಹಲವು ಬೆರಳಚ್ಚು ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಸಿಸಿ ಕ್ಯಾಮರಗಳನ್ನು ಹಾನಿಗೊಳೀಸಿದ ಬಳಿಕ ಕಳವು ಕೃತ್ಯ ನಡೆದೆನ್ನಲಾಗಿದೆ. ಕುಟುಂಬ ಒಂದು ತಿಂಗಳ ಹಿಂದೆ ಗಲ್ಪ್ಗೆ ತೆರಳಿದ್ದರು. ಮೊನ್ನೆ ಬೆಳಿಗ್ಗೆ ಸಂಬoಧಿಕರಿಗೆ ಕಳವಿನ ಬಗ್ಗೆ ಗಮನಕ್ಕೆ ಬಂದಿದೆ. ಸುಮಾರು ೧೦ ದಿನಗಳ ಹಿಂದೆಯಷ್ಟೆ ಇದೇ ಮನೆಯ ಸುಮಾರು ೧೦೦ ಮೀಟರ್ ಅಂತರದಲ್ಲಿ ಮಜಲ್ ಎಂಬಲ್ಲಿ ಬೀಗ ಹಾಕಿದ ಮೊಹಮ್ಮದ್ ರಫೀಕ್ ಎಂಬವರ ಮನೆಯಿಂದ ೭ಪವನ್, ೬೦ ಸಾವಿರ ರೂ ಕಳವುಗೈದ ಘಟನೆಯೂ ನಡೆದಿದೆ. ಕಳ್ಳರು ಬೀಗ ಹಾಕಿದ ಮನೆಗಳನ್ನೇ ಟಾರ್ಗೇಟ್ ಮಾಡಿ ಕಳವು ಕೃತ್ಯ ವೆಸಗುತ್ತಿದ್ದಾರೆ. ಇದರಿಂದ ಜನರು ಆತಂಕಕ್ಕೊಳಗಾಗಿದೆ.


Share with

Leave a Reply

Your email address will not be published. Required fields are marked *