ಕಾಸರಗೋಡು: ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಉಪ್ಪಳ ನಯಾಬಝಾರ್ ಬಳಿಯ ಅಂಬಾರು ನಿವಾಸಿ ಪಳ್ಳತ್ತಿಲ್ ಇದ್ದೀನ್ ಕುಖ್ ಆಲಿಯಾಸ್ ಇರ್ಷಾದ್ (33) ಎಂಬಾತನನ್ನು ಕುಂಬಳೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಉಪ್ಪಳ ನಿವಾಸಿ ಉಮರ್ ಫಾರೂಕ್ ಎಂಬುವರನ್ನು ಅಪಹರಿಸಿ ಬಂಬ್ರಾಣದಲ್ಲಿ ಹಲ್ಲೆ ನಡೆಸಿದ್ದ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ.