ಉಪ್ಪಳ: ಮೂಡಂಬೈಲು ಸಮೀಪದ ದಡ್ಡಂಗಡಿ ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಶ್ರೀ ಮೊಗೇರ ದೈವಗಳ ನೇಮೋತ್ಸವ ಜ.27ರಂದು ನಡೆಯಲಿದೆ.
ಜ.27ರಂದು ಬೆಳಿಗ್ಗೆ ಗಣಹೋಮ ಮತ್ತು ಶುದ್ದ ಹೋಮ ನಡೆಯಿತು. ಸಂಜೆ 4ಕ್ಕೆ ಗುಳಿಗ ನೇಮ, ಸಂಜೆ 6ಕ್ಕೆ ಭಂಡಾರ ಏರುವುದು, ರಾತ್ರಿ 8ಕ್ಕೆ ಅನ್ನದಾನ, ರಾತ್ರಿ 9ಕ್ಕೆ ಧರ್ಮದೈವ ಚೌಕಾರು ಗುಳಿಗನ ನೇಮ, 11ಕ್ಕೆ ಕೊರಗು ತನಿಯ ದೈವದ ನೇಮ, 12ಕ್ಕೆ ಶ್ರೀ ಮೊಗೇರ ದೈವಗಳ ನೇಮೋತ್ಸವ, ರಾತ್ರಿ 2ರಿಂದ ತನ್ನಿಮಾನಿಗ ದೈವವು ಶ್ರೀ ಮೊಗೇರ ದೈವಗಳ ಸನ್ನಿಧಿಗೆ ಬರುವುದು. ಜ.28ರಂದು ಭಂಡಾರ ಇಳಿಯುವುದು ನಡೆಯಲಿದೆ.