ಉಪ್ಪಳ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣ ಮೂರ್ತಿ ಎಂ.ಎಸ್ ಉದ್ಘಾಟಿಸಿದರು.
ವಾರ್ಡ್ ಸದಸ್ಯರಾದ ರಾಜೀವಿ ಕಯ್ಯಾರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಪೈವಳಿಕೆ ಪಂಚಾಯಿತಿನ ಸದಸ್ಯರಾದ ಅಶೋಕ ಭಂಡಾರಿ ಶುಭ ಹಾರೈಸಿದರು. ಪೈವಳಿಕೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಚ್ಯುತ ಚೇವಾರ್, ಪೈವಳಿಕೆಯ ಕೆ.ಎಸ್.ಇ.ಬಿಯ ಅಸಿಸ್ಟೆಂಟ್ ಇಂಜಿನಿಯರ್ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು, ಗಲ್ಫ್ ಉದ್ಯಮಿ ಮೊಹಮ್ಮದ್ ಸಲೀಂ ಚೇವಾರ್, ಶಾಲಾ ವ್ಯವಸ್ಥಾಪಕ ನಳಿನಿ, ನಿವೃತ್ತ ಮುಖ್ಯ ಶಿಕ್ಷಕರಾದ ಅಬ್ದುಲ್ ಖಾದರ್, ನಿವೃತ್ತ ಮುಖ್ಯ ಶಿಕ್ಷಕರಾದ ಕೃಷ್ಣ ಭಟ್, ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಜಗದೀಶ್, ಉಪಾಧ್ಯಕ್ಷರಾದ ಅಬ್ದುಲ್ ಅಸೀಸ್ ಚೇವಾರ್, ಎಂ.ಪಿ.ಟಿ.ಎ ಅಧ್ಯಕ್ಷೆ ತಾಹಿರಾಬಾನು ಉಪಸ್ಥಿತರಿದ್ದರು.
ಪ್ರಸಕ್ತ ಶೈಕ್ಷಣಿಕ ವರ್ಷ ನಿವೃತ್ತಿ ಹೊಂದುತ್ತಿರುವ ಹಿರಿಯ ಶಿಕ್ಷಕಿ ಸರಸ್ವತಿ.ಬಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ರಾಜೇಶ್ವರಿ.ಬಿ ಸನ್ಮಾನ ಪತ್ರ ವಾಚಿಸಿದರು. ರವಿಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಪ್ರಮೀಳಾ ಡಿ.ಎನ್ ಬಹುಮಾನಿತರ ವಿವರಗಳನ್ನು ವಾಚಿಸಿದರು. ಶಿಕ್ಷಕ ಹ್ಯಾರಿಸ್ ಧನ್ಯವಾದ ನೀಡಿದರು. ಪ್ರಸಾದ್ ರೈ, ಪ್ರೀಮಾ ಕ್ರಾಸ್ತಾ ಹಾಗೂ ಸಾತ್ವಿಕ್ ಎನ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅನೀಸ್, ರತೀಶ್, ಫಯಾಸ್, ಶ್ರೀದೇವಿ, ಕವಿತಾ, ಗೋಪಾಲ ಕೃಷ್ಣ ಭಟ್ ಸಹಕರಿಸಿದರು.