ಉಪ್ಪಳ: ಟೈಲರ್ಸ್ ಸಂಘ ಬಿಎಂಎಸ್ ಜಿಲ್ಲಾ ಸಮ್ಮೇಳನ

Share with

ಉಪ್ಪಳ: ಭಾರತೀಯ ಟೈಲರ್ಸ್ ಸಂಘ ಬಿಎಂಎಸ್ ಇದರ ಜಿಲ್ಲಾ ಸಮ್ಮೇಳನ ಮಾ.29ರಂದು ಕಾಸರಗೋಡು ರೋಟರಿ ಭವನದಲ್ಲಿ ನಡೆಯಿತು.

ಟೈಲರ್ಸ್ ಸಂಘ ಬಿಎಂಎಸ್ ಜಿಲ್ಲಾ ಸಮ್ಮೇಳನ

ಸಮಿತಿ ಅಧ್ಯಕ್ಷ ದಿನೇಶ್ ಬಂಬ್ರಾಣರವರು ಅಧ್ಯಕ್ಸತೆ ವಹಿಸಿದರು. ಟೈಲರ್ಸ್ ಸಂಘದ ರಾಜ್ಯ ಉಪಾಧ್ಯಕ್ಷ ಸಿ.ವಿ ತಂಬಾನ್ ಉದ್ಘಾಟಿಸಿ ಮತನಾಡಿದ ಅವರು ಕೇರಳ ಸರಕಾರ ಟೈಲರಿಂಗ್ ಕೆಲಸ ಮಾಡುವ ಕಾರ್ಮಿಕರ ಕ್ಷೇಮನಿಧಿ ಅಂಷಾದಾಯ ಹೆಚ್ಚಿಸಿ ಅದಕ್ಕೆ ಅನುಗುಣವಾಗಿ ಸವಲತ್ತುಗಳನ್ನು ನೀಡದೆ ಕಾರ್ಮಿಕರಿಗೆ ವಂಚಿಸುತ್ತಿರುವ ಕೇರಳ ಸರಕಾರದ ಮೋಸವನ್ನು ಕಾರ್ಮಿಕರು ಅರಿತುಗೊಳ್ಳಬೇಕು. ಎಂದು ಸೂಚಿಸಿದರು.

ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್, ಜಿಲ್ಲಾ ಜೊತೆ ಕಾರ್ಯದರ್ಶಿ ಸುನಿಲ್ ವಾಯಕ್ಕೋಡ್, ಯಶವಂತಿ ಬೆಜ್ಜ ಶುಭಾಂಶನೆಗೈದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಗೀತಾ ಬಾಲಕೃಷ್ಣನ್ ವರದಿ ಮಂಡಿಸಿದರು.

ವಿದ್ಯಾ ಪರವನಡ್ಕ ಲೆಕ್ಕ ಪತ್ರ ಮಂಡಿಸಿದರು ಜಿಲ್ಲಾ ಅಧ್ಯಕ್ಷರಾದ ಉಪೇಂದ್ರನ್ ಕೋಟೆಕಣಿ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಸಮಿತಿ ಸದಸ್ಯ ಕೃಷ್ಣನ್ ಪುಲ್ಲೂರ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಶ್ಯಾಮಲಾ ಪರವನಡ್ಕ ಸ್ವಾಗತಿಸಿ, ಚಿತ್ರಲೇಖ ಮಾವಿನಕಟ್ಟೆ ಧನ್ಯವಾದ ನೀಡಿದರು. ಜಿಲ್ಲೆಯ ವಿವಿಧ ಟೈಲರಿಂಗ್ ಯೂನಿಟ್ ನ ಪದಾಧಿಕಾರಿಗಳು ಭಾಗವಹಿಸಿದರು.


Share with

Leave a Reply

Your email address will not be published. Required fields are marked *