ಉಪ್ಪಳ: ರಸ್ತೆ ಬದಿಯಲ್ಲಿ ಮರದ ವಿದ್ಯುತ್ ಕಂಬ; ಅಪಾಯದ ಭೀತಿ

Share with

ಉಪ್ಪಳ: ಕಾಂಕ್ರೀಟ್, ಕಬ್ಬಿಣದ ವಿದ್ಯುತ್ ಕಂಬಗಳು ಸ್ಥಾಪಿಸಲಾಗುತ್ತಿದ್ದರೂ ಇನ್ನೂ ಮರದ ಕಂಬಗಳು ಆತಂಕಕ್ಕೆ ಕಾರಣವಾಗಿದೆ.

ರಸ್ತೆ ಬದಿಯಲ್ಲಿ ಮರದ ವಿದ್ಯುತ್ ಕಂಬ

ಕೈಕಂಬ-ಬಾಯಾರು ರಸ್ತೆಯ ಕನ್ನಟಿಪಾರೆ ಬಳಿಯ ಕುಂಡಚ್ಚಕಟ್ಟೆ ಎಂಬಲ್ಲಿ ಹಿರಿಯರ ಕಾಲದ ಮರದ ವಿದ್ಯುತ್ ಕಂಬ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಯಾಗಿದೆ. ಎರಡು ಮರದ ವಿದ್ಯುತ್ ಕಂಬಗಳಲ್ಲಿ ಪ್ರಮುಖ ತಂತಿಗಳು ಹಾದುಹೋಗಿದೆ. ಈ ಕಂಬಕ್ಕೆ ಹಲವು ವರ್ಷಗಳ ಹಿಂದೆ ಬೆಂಕಿ ತಗಲಿ ಒಂದು ಕಂಬ ಅಲ್ಪ ಕರಚಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ.

ಅಲ್ಲದೆ ಈ ಕಂಬಗಳ ಸ್ಟೇ ವಯರ್ ತುಂಡಾಗಿ ಹೋಗಿ ಅಪಾಯದ ಸ್ಥಿತಿ ಕಾರಣವಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಈ ಹಿಂದೆ ಈ ರಸ್ತೆಯ ವಿವಿಧ ಕಡೇಗಳಲ್ಲಿ ಮರದ ಕಂಬವನ್ನು ತೆರವುಗೊಳೀಸಲಾಗಿದೆ.

ಆದರೆ ಇಲ್ಲಿರುವ ಕಂಬವನ್ನು ತೆರವುಗೊಳೀಸಲು ವಿದ್ಯುತ್ ಇಲಾಖೆ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗುತ್ತಿದೆ. ದುರಂತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕಂಬಗಳನ್ನು ತೆರವುಗೊಳಿಸಿ ಹೊಸಕಂಬವನ್ನು ಸ್ಥಾಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *