ಉಪ್ಪಿನಂಗಡಿ: ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ..!

Share with

ಉಪ್ಪಿನಂಗಡಿ: ’ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯಲ್ಲಿ ಡಿ.14ರಂದು‌ ನಡೆದ ಹೊನಲು ಬೆಳಕಿನ `ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಮಂಗಳೂರಿನ ರೋಲನ್ ಪಿಂಟೋ ಎಂಬ ತೀರ್ಪುಗಾರನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳೂರಿನ ಕಾನಾ-ಕೆಜಿಎಫ್ ನಡುವೆ ನಡೆಯುತ್ತಿದ್ದ ಸೆಮಿಫೈನಲ್ ಪಂದ್ಯಾಟ ನಡೆಯುತ್ತಿತ್ತು, ಈ ವೇಳೆ ಅಂಪೈರ್ ರೋಲನ್ ಪಿಂಟೋ ಎಲ್‍ಬಿಡಬ್ಲ್ಯು ತೀರ್ಪನ್ನ ನೀಡಿದ್ದರು, ಆದರೆ ಅದು ತಪ್ಪು ಎಂದು ಹೊರಗಿನಿಂದ ಬಂದ ಕೆಲ ಯುವಕರು ವಿರೋಧಿಸಿದ್ದು ಸೀದಾ ಮೈದಾನಕ್ಕೆ ನುಗ್ಗಿ ಅಂಪೈರ್ ಮೇಲೆ ಹಲ್ಲೆ ಮುಂದಾಗಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Share with

Leave a Reply

Your email address will not be published. Required fields are marked *