ಬೆಂಗಳೂರು, ಅ.14: ಭಾರತದ ವಿಚಾರಗಳು ಹಾಗೂ ಸಂಸ್ಕೃತಿ, (American entrepreneur )ಮಾನವಿಯ ಮೌಲ್ಯಗಳ ಬಗ್ಗೆ ವಿದೇಶಿಗರು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಭಾರತದ್ದು ಅತಿಥಿ ದೇವೋ ಭವ ಸಂಸ್ಕೃತಿ, ಭಾರತದಲ್ಲಿ ವಿದೇಶಿಗರಿಗೆ ವಿಭಿನ್ನವಾದ ಗೌರವವನ್ನು ನೀಡಲಾಗುತ್ತದೆ. ವಿದೇಶಿಗರಿಗೂ ಅಷ್ಟೇ ಭಾರತದ ಸಂಸ್ಕೃತಿ, ಇಲ್ಲಿನ ವಿಚಾರಧಾರೆಗಳು ತುಂಬಾ ಇಷ್ಟಪಡುತ್ತಾರೆ. ಇದೀಗ ಅಮೆರಿಕ ವ್ಯಕ್ತಿಯೊಬ್ಬರು ತನ್ನ ಉದ್ಯಮಗಾಗಿ ಭಾರತಕ್ಕೆ ಅಂದರೆ ಕರ್ನಾಟಕಕ್ಕೆ ಬಂದಿದ್ದಾರೆ. ಇದೀಗ ಅವರಿಗೆ ಭಾರತ ಸರ್ಕಾರ ವೀಸಾ ನೀಡಿ, 5 ವರ್ಷಗಳ ಕಾಲ ಭಾರತದಲ್ಲಿ ಇರಲು ಅವಕಾಶ ನೀಡಿದೆ. ಈ ಖುಷಿಯ ವಿಚಾರವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ತಮ್ಮ ಕರ್ನಾಟಕದ ಸ್ನೇಹಿತೆಯನ್ನು ಪರಿಚಯ ಮಾಡಿದ್ದಾರೆ.
ಅಮೆರಿಕದ ಟೋನಿ ಕ್ಲೋರ್ ಎಂಬ ಉದ್ಯಮಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈ ವಿಚಾರವನ್ನು ಎಕ್ಸ್ನಲ್ಲಿ ತಮ್ಮ ಗೆಳತಿಗೆ ಚುಂಬಿಸುವ ಫೋಟೋವನ್ನು ಹಾಕಿಕೊಂಡು ಹೇಳಿಕೊಂಡಿದ್ದಾರೆ. ಇನ್ನು ಈ ಪೋಸ್ಟ್ನಲ್ಲಿ ಪ್ರಧಾನಿ ಮೋದಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಟೋನಿ ಕ್ಲೋರ್ ಅವರನ್ನು ಈ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ವಿಶೇಷ ಸಂದರ್ಶನವನ್ನು ಮಾಡಿತ್ತು. ಐದು ವರ್ಷಗಳ ಭಾರತೀಯ ವೀಸಾವನ್ನು ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಟೋನಿ ಕ್ಲೋರ್, ಭಾರತದ ಸ್ವಾಗತಾರ್ಹ ರೀತಿಯನ್ನು ಅಮೆರಿಕದ ನಿರ್ಬಂಧಿತ ವಿಧಾನಕ್ಕೆ ಹೋಲಿಸಿದ್ದಾರೆ. ಅಂದರೆ, ಭಾರತ ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೆ ಅಮೆರಿಕ ವಲಸಿಗರನ್ನು ಓಡಿಸುವ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಭಾರತವು ವಿದೇಶಿ ಬ್ಲಾಕ್ಚೈನ್ ಮತ್ತು AI ಬಿಲ್ಡರ್ಗಳನ್ನು ಸ್ವಾಗತಿಸುತ್ತಿದೆ. ಈ ಕಾರಣಕ್ಕೆ ನನಗೆ 5 ವರ್ಷಗಳ ವೀಸಾ ನೀಡಿದೆ ಎಂದು ಹೇಳಿದ್ದಾರೆ.





