US-Israel-Iran Conflict; ಕೇಂದ್ರ ಸರಕಾರದ ನಿಲುವೇ ನಮ್ಮ ನಿಲುವು:ಆರ್‌ಎಸ್‌ಎಸ್

Share with

ಪಾಣಿಪತ್(ಹರಿಯಾಣ):ಅಮೆರಿಕ-ಇಸ್ರೇಲ್‌ ಮತ್ತು ಇರಾನ್ ಸಂಘರ್ಷದ ಕುರಿತು ಭಾರತ ಸರಕಾರ ತೆಗೆದುಕೊಳ್ಳುವ ನಿಲುವು ಸಂಘದ ನಿಲುವೂ ಆಗಿರುತ್ತದೆ. ಈ ಯುದ್ಧ ಆದಷ್ಟು ಬೇಗ ಕೊನೆಗೊಳ್ಳಬೇಕು ಮತ್ತು ಇತ್ಯರ್ಥವಾಗಬೇಕು ಎಂದು ಆರ್ ಎಸ್ ಎಸ್ ಹೇಳಿದೆ.

ಆರ್‌ಎಸ್‌ಎಸ್ ಸಹ ಸಹಕಾರ್ಯ ವಾಹ ಮುಕುಂದ ಸಿ.ಆರ್. ಅವರು ಸುದ್ದಿಗಾರರೊಂದಿಗೆ ಮಾತನಾಡಿ “ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದಾರೆ. ಸಂಘವು ಸಾಮಾನ್ಯವಾಗಿ ಎಲ್ಲಾ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡುವುದಿಲ್ಲ. ಆದಾಗ್ಯೂ, ಅಲ್ಲಿನ ಸ್ಥಳೀಯ ಸಮಾಜದ ಹಾಗೂ ಹಿಂದೂ ಸಮುದಾಯದ ಹಿತಾಸಕ್ತಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಯಾವಾಗಲೂ ಉತ್ತಮವಾದದ್ದನ್ನು ಆಶಿಸುತ್ತೇವೆ. ಈಗಲೂ ಸಹ, ನಾವು ನಮ್ಮ ಹಿಂದೂ ಸಂಘಟನೆಗಳು ಮತ್ತು ಸಂಬಂಧಿತ ಗುಂಪುಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದರು.

ಸಮಲ್ಪಾದಲ್ಲಿ ನಡೆದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸ ಸಂಘ ಚಾಲಕ ಮೋಹನ್ ಭಾಗವತ್, ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿ ಪ್ರಮುಖರು ಭಾಗವಹಿಸಿದ್ದಾರೆ.


Share with

Leave a Reply

Your email address will not be published. Required fields are marked *