ಒಂದು ಪಂದ್ಯವಾಡಿದ್ರೆ ವೈಭವ್ ಸೂರ್ಯವಂಶಿಗೆ ಸಿಗುತ್ತೆ 1.60 ಲಕ್ಷ ರೂ

Share with

ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿದರೆ ವೈಭವ್ ಸೂರ್ಯವಂಶಿಗೆ ಸಿಗುವ ವೇತನ ಎಷ್ಡು? ಈ ಪ್ರಶ್ನೆಗೆ ಉತ್ತರ ದಿನವೊಂದಕ್ಕೆ 40 ಸಾವಿರ ರೂ. ಅಚ್ಚರಿ ಎನಿಸಿದರೂ ಇದುವೇ ಸತ್ಯ. ಅಂದರೆ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿದರೆ ವೈಭವ್ ಸೂರ್ಯವಂಶಿಗೆ ಪಂದ್ಯವೊಂದಕ್ಕೆ 1 ಲಕ್ಷ 60 ಸಾವಿರ ರೂ. ಸಿಗಲಿದೆ.

ಬಿಸಿಸಿಐ ನಿಯಮದ ಪ್ರಕಾರ, ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯುವ ಆಟಗಾರನಿಗೆ ಪ್ರತಿ ದಿನಕ್ಕೆ ಕನಿಷ್ಠ 40 ಸಾವಿರ ರೂ. ನೀಡಲಾಗುತ್ತದೆ. ಅಂದರೆ ಪಾದಾರ್ಪಣೆ ಪಂದ್ಯದಿಂದ 20 ಪಂದ್ಯಗಳವರೆಗೆ ದಿನಕ್ಕೆ 40 ಸಾವಿರ ರೂ. ನಿಗದಿ ಪಡಿಸಲಾಗಿದ್ದು, ಅದರಂತೆ ಒಂದು ಮ್ಯಾಚ್ಗೆ 1.60 ಲಕ್ಷ ರೂ. ನೀಡಲಾಗುತ್ತದೆ.

ವೈಭವ್ ಸೂರ್ಯವಂಶಿ ರಣಜಿ ಟೂರ್ನಿಯಲ್ಲಿ ಈವರೆಗೆ ಆಡಿರುವುದು ಕೇವಲ 6 ಪಂದ್ಯಗಳನ್ನು ಮಾತ್ರ. ಹೀಗಾಗಿ ಅವರು ಮೊದಲ ಗ್ರೇಡ್ನಲ್ಲಿದ್ದಾರೆ. ಅಂದರೆ 20 ಪಂದ್ಯಗಳ ಪಟ್ಟಿಯ ಪ್ರಕಾರ ವೈಭವ್ಗೆ ವೇತನ ನೀಡಲಾಗುತ್ತದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಬಿಹಾರ ಪರ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ ಪ್ರತಿ ಮ್ಯಾಚ್ಗೆ 1 ಲಕ್ಷ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.

ಇನ್ನು 21 ರಿಂದ 40 ಪಂದ್ಯಗಳನ್ನಾಡಿರುವ ಅನುಭವಿ ಆಟಗಾರರಿಗೆ ಪ್ರತಿ ದಿನಕ್ಕೆ 50 ಸಾವಿರ ರೂ. ನೀಡಲಾಗುತ್ತದೆ. ಅದರಂತೆ ಒಂದು ರಣಜಿ ಪಂದ್ಯಕ್ಕೆ 2 ಲಕ್ಷ ರೂ, ಸಿಗಲಿದೆ. ಹಾಗೆಯೇ 40 ಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಟಗಾರರು ಪ್ರತಿ ದಿನಕ್ಕೆ 60 ಸಾವಿ ರೂ. ನಂತೆ ಒಂದು ಮ್ಯಾಚ್ಗೆ 2.40 ಲಕ್ಷ ರೂ. ಪಡೆಯಲಿದ್ದಾರೆ.

ಸದ್ಯ ಬಿಹಾರ ತಂಡದ ಉಪನಾಯಕನಾಗಿ ರಣಜಿ ಟೂರ್ನಿಯಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿರುವ ವೈಭವ್ ಸೂರ್ಯವಂಶಿ ಮೊದಲ ಸುತ್ತಿನ ಐದು ಮ್ಯಾಚ್ಗಳಲ್ಲೂ ಕಣಕ್ಕಿಳಿದರೆ ಒಟ್ಟು  650,000 ರೂ. ಪಡೆಯಲಿದ್ದಾರೆ.


Share with

Leave a Reply

Your email address will not be published. Required fields are marked *