ಮಂಜೇಶ್ವರ : ಇಲ್ಲಿನ ಸುಂಕದಕಟ್ಟೆ ವರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ವತಿಯಿಂದ ನಡೆಯಲಿರುವ 43ನೇ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ಯುವ ಬಳಗದ ವತಿಯಿಂದ “ಕಬ್ಬಡ್ಡಿ ಪಂದ್ಯಾಟ 2025” ಆ.27 ಮತ್ತು 28 ರಂದು ಬೆಳಗ್ಗೆ 10 ಗಂಟೆಯಿಂದ ವರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.


1.60 KG ಕಬ್ಬಡ್ಡಿ ಪಂದ್ಯಾಟ
2.ಆಹ್ವಾನಿತ ತಂಡಗಳ ಮುಕ್ತ ಕಬಡ್ಡಿ ಪಂದ್ಯಾಟ
60 KG ಕಬ್ಬಡ್ಡಿ ಪಂದ್ಯಾಟ
60 KG ಕಬ್ಬಡ್ಡಿ ಪಂದ್ಯಾಟ ಆ.27 ರಂದು ನಡೆಯಲಿದ್ದು ಪ್ರಥಮ ಬಹುಮಾನ 15000ರೂ. ನಗದು, ಶಾಶ್ವತ ಫಲಕ, ದ್ವಿತೀಯ ಬಹುಮಾನ 10000ರೂ. ನಗದು, ಶಾಶ್ವತ ಫಲಕ, ತೃತೀಯ ಹಾಗೂ ಚತುರ್ಥ ಬಹುಮಾನ 4000 ರೂ. ನಗದು, ಶಾಶ್ವತ ಫಲಕ ನೀಡಲಾಗುತ್ತಿದೆ.
ಆಹ್ವಾನಿತ ತಂಡಗಳ ಮುಕ್ತ ಕಬಡ್ಡಿ ಪಂದ್ಯಾಟ
ಆಹ್ವಾನಿತ ತಂಡಗಳ ಮುಕ್ತ ಕಬಡ್ಡಿ ಪಂದ್ಯಾಟ ಆ.28ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು ಪ್ರಥಮ ಬಹುಮಾನ 15000ರೂ. ನಗದು, ಶಾಶ್ವತ ಫಲಕ, ದ್ವಿತೀಯ ಬಹುಮಾನ 10000ರೂ. ನಗದು, ಶಾಶ್ವತ ಫಲಕ, ತೃತೀಯ ಹಾಗೂ ಚತುರ್ಥ ಬಹುಮಾನ 4000 ರೂ. ನಗದು, ಶಾಶ್ವತ ಫಲಕ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ಬಹುಮಾನ: ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸವ್ಯಸಾಚಿ
ಪ್ರವೇಶ ಶುಲ್ಕ: 1000 ರೂ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7907786338, 8075285997




