ಕಾಸರಗೋಡು: ವರ್ಕಾಡಿ ಶ್ರೀ ಕಾವೀಃ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2023 ದಶಂಬರ 17, 18 ಮತ್ತು 19ರಂದು ನಡೆಯಲಿರುವ “ಷಷ್ಠೀ ಮಹೋತ್ಸವ”ದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿಗಳು ಬಿಡುಗಡೆ ಮಾಡಿದರು.
ಗೌರವಾಧ್ಯಕ್ಷ ದುರ್ಗಾದಾಸ ಭಂಡಾರಿ, ಆಡಳಿತ ಮೊಕ್ತೇಸರ ಸುಭಾಸ್ ಚಂದ್ರ ಅಡಪ, ಸಹ ಮೊಕ್ತೇಸರರು,ಉತ್ಸವ & ಅಭಿವೃದ್ಧಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ಡಿ. 12ರಂದು ಅಮಾವಾಸ್ಯೆ ರಂಗಪೂಜೆ, ಡಿ. 17ರಂದು ಪಂಚಮಿ ಉತ್ಸವ, ಡಿ.18ರಂದು ತುಲಾಭಾರ, ಚಂಪಾ ಷಷ್ಠೀ, ರಾತ್ರಿ ಬಲಿ ಉತ್ಸವ ಮತ್ತು ಡಿ. 19ರಂದು ಸಪ್ತಮೀ ಉತ್ಸವ ನಡೆಯಲಿದೆ.
ಕ್ಷೇತ್ರದ ಭಕ್ತಾದಿಗಳು ಷಷ್ಠೀ ಉತ್ಸವದಲ್ಲಿ ಪಾಲ್ಗೊಂಡು ತನು ಮನ ಧನಗಳಿಂದ ಸಹಕರಿಸಬೇಕಾಗಿ ಆಡಳಿತ ಮಂಡಳಿ ಕೋರಿದೆ.
ಶ್ರೀ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳು ಭರದಿಂದ ನಡೆಯುತಿದ್ದು, ಭಕ್ತಾದಿಗಳು ಸರ್ವವಿಧದಿಂದ ಜೀರ್ಣೋದ್ದಾರ ಸಮಿತಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.