ವರ್ಕಾಡಿ ಚರ್ಚ್ ಹಾಗೂ ಮೀಯಪದವು ಭಜನಾ ಮಂದಿರದಿoದ  ಕಾಣಿಕೆ ಹುಂಡಿ ಕಳವು: ಸಿಸಿ ಕ್ಯಾಮರದಲ್ಲಿ ಕಳವು ದೃಶ್ಯ ಪತ್ತೆ: ಪೋಲೀಸರಿಂದ ತನಿಖೆ

Share with


ಮಂಜೇಶ್ವರ: ವರ್ಕಾಡಿ ಚರ್ಚ್ ಹಾಗೂ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಿoದ  ಕಾಣಿಕೆ ಹುಂಡಿಯನ್ನು ಕಳವುಗೈದ ಘಟನೆ ಸೋಮವಾರ ಮುಂಜಾನೆ  ನಡೆದಿದೆ.   ಸ್ಕೂಟರ್‌ನಲ್ಲಿ ಬಂದ ಕಳ್ಳ ಹೆಲ್ಮೆಟ್ ಧರಿಸಿಯೆ ಚರ್ಚ್ ಗೇಟ್ ನೊಳಗೆ ಪ್ರವೇಶಿ  ಸಿಟೌಟ್ ಬಳಿಯಲ್ಲಿರುವ ಏಸು ಕ್ರಿಸ್ತರ ಹಾಗೂ ವೇಲಂಕಣಿ ಮಾತೆಯ ವಿಗ್ರಹದ ಮುಂಭಾಗದಲ್ಲಿರಿಸಿದ ಎರಡು ಕಾಣಿಕೆ ಹುಂಡಿಯ ಬೀಗ ಮುರಿದು ಹಣ ದೋಚಿ ಡಬ್ಬಿಯನ್ನು ಪರಿಸರದಲ್ಲಿ ಉಪೇಕ್ಷಿಸಲಾಗಿದೆ.  ಇನ್ನೊಂದು ಕಾಣಿಕೆ ಹುಂಡಿಯ ಬೀಗ ಮುರಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ದೇವಾಲಯದ ಒಳಗೆ ಪ್ರವೇಶಿಸಲು ಯತ್ನ ವಿಫಲಗೊಂಡಿದೆ. ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಪರಿಸರದಲ್ಲಿರುವ ಕಾಣಿಕೆ ಹುಂಡಿಯನ್ನು ಮುರಿದು ಹಣ ಕಳವುಗಯ್ಯಲಾಗಿದೆ. ಸೋಮವಾರ ಬೆಳಿಗ್ಗೆ ಕಳವು ಕೃತ್ಯ ಬೆಳಕಿಗೆ ಬಂದಿದೆ. ಚರ್ಚ್ ನಲ್ಲಿ ಪೂಜೆಗೆಂದು ಆಗಮಿಸಿದ ಭಕ್ತರಿಗೆ  ಕಳವು ಕೃತ್ಯ ಗಮನಕ್ಕೆ ಬಂದಿದ್ದು, ಚರ್ಚ್ ಫಾದರ್ ಬೇಸಿಲ್ ವಾಸ್‌ರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಫಾದರ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಚರ್ಚ್ಗೆ ತಲುಪಿದ್ದಾರೆ.  ಸ್ಥಳಕ್ಕೆ ಮಂಜೇಶ್ವರ ಪೋಲೀಸರು ತಲುಪಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಚರ್ಚ್ನ ಸಿಸಿ ಕ್ಯಾಮರದಲ್ಲಿ ಪತ್ತೆಯಾದ  ದೃಶ್ಯವನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚ್ ಪಾಲನಾ ಸಮಿತಿ ಉಪಾಧ್ಯಾಕ್ಷ ರಾಜೇಶ್ ಡಿ ಸೋಜಾ ಪೋಲೀಸರಿಗೆ ದೂರು ನೀಡಿದ್ದಾರೆ.ಕೇಸು ದಾಖಲಿಸಿದ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *