ಖ್ಯಾತ ನಾಟಕ ಕಲಾವಿದರೂ, ಮಂಗಳೂರಿನ ಪಕ್ಕಲಡ್ಕ ಯುವಕ ಮಂಡಲದ ಸಕ್ರೀಯ ಸದಸ್ಯ ಕೆ. ರಾಘವ ಬಂಗೇರ (78)ರವರು ವಯೋಸಹಜ ಕಾಯಿಲೆಯಿಂದಾಗಿ ನಿಧನ ಹೊಂದಿದ್ದಾರೆ. ತಮ್ಮ ಎಳೆಯ ಪ್ರಾಯದಲ್ಲೇ ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಲು ಸಂಪೂರ್ಣವಾಗಿ ತೊಡಗಿಸಿ ಕೊಂಡ ಇವರು, ಹಲವು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿದ್ದರು.
ಸ್ಥಳೀಯ ಸಂಘ-ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿದ್ದ ಇವರು ಪತ್ನಿ, ಮೂವರು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.